-->
ಮಂಗಳೂರು-  ಸೇಡು ತೀರಿಸಲು ನಡೆದಿದ್ದ ಹಿಂದು ಹುಡುಗಿ ಮುಸ್ಲಿಂ ಹುಡುಗನ ಮದುವೆ- ಕಲ್ಯಾಣ ಸಂಭ್ರಮ ಮುಗಿಯುವ ಮೊದಲೆ ನವದಂಪತಿಗಳು  ಅರೆಸ್ಟ್!

ಮಂಗಳೂರು- ಸೇಡು ತೀರಿಸಲು ನಡೆದಿದ್ದ ಹಿಂದು ಹುಡುಗಿ ಮುಸ್ಲಿಂ ಹುಡುಗನ ಮದುವೆ- ಕಲ್ಯಾಣ ಸಂಭ್ರಮ ಮುಗಿಯುವ ಮೊದಲೆ ನವದಂಪತಿಗಳು ಅರೆಸ್ಟ್!

ಮಂಗಳೂರು: ಅನ್ಯಕೋಮಿನ ಯುವಕನನ್ನು ಮದುವೆಯಾದ ತಾಯಿ ಹಾಗೂ ಆಕೆಯ ಪತಿಯ ಕುಟುಂಬಸ್ಥರ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಪುತ್ರಿಯನ್ನು ಲವ್ ಜಿಹಾದ್​ ನಡೆಸಿ ಮದುವೆಯಾಗಿದ್ದಾರೆನ್ನಲಾದ ನವಜೋಡಿಯನ್ನು ಮಂಗಳೂರು ಪೊಲೀಸರು ಕಳವು ಆರೋಪದ ಮೇಲೆ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ನವ ವಿವಾಹಿತರಾದ ರೇಷ್ಮಾ ಹಾಗೂ ಅಕ್ಬರ್ ಅಲಿ ಬಂಧಿತ ಆರೋಪಿಗಳು.

ನಗರದ ಅರೋಮಾ ಪಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಹಜರತ್ ಅಲಿಯಾಸ್ ಯಶೋದಾ 22 ವರ್ಷಗಳ ಹಿಂದೆ ಹಿಂದೂ ಯುವಕನನ್ನು ಮದುವೆಯಾಗಿದ್ದರು. ಈ ಬಗ್ಗೆ ಆಕೆಯ ಕುಟುಂಬ ಸೇಡು ತೀರಿಸಿಕೊಳ್ಳಲು ಕಾಯುತ್ತಿತ್ತು. ಇದೀಗ ನಿಶ್ಚಿತಾರ್ಥವಾಗಿದ್ದ ಆಕೆಯ ಪುತ್ರಿ ರೇಷ್ಮಾಳನ್ನು ಲವ್ ಜಿಹಾದ್ ನಡೆಸಿ ಯಶೋದಾ ಸೋದರಿಯ ಮಗ ಗದಗದ ಅಕ್ಬರ್ ಅಲಿ ಎಂಬಾತನಿಗೆ ಮದುವೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯಶೋದಾ ಹಾಗೂ ಅವರ ಕುಟುಂಬಸ್ಥರಿಗೆ ತಿಳಿಯದಂತೆ ರೇಷ್ಮಾಳ ಮನವೊಲಿಸಿ ಆಕೆಯನ್ನು ಅಕ್ಬರ್ ಅಲಿ ಜೊತೆಯಲ್ಲಿ ವಿವಾಹ ಮಾಡಿದ್ದರು. 


ಅಲ್ಲದೆ ಮನೆಯಿಂದ ಬರುವಾಗ ರೇಷ್ಮಾಳ ಬಳಿ ಮನೆಯಲ್ಲಿದ್ದ ಚಿನ್ನಾಭರಣ, ನಗದು ತರುವಂತೆ ಹೇಳಿದ್ದರು. ಹೀಗಾಗಿ ಆಕೆ ಚಿನ್ನಾಭರಣ, ನಗದು ಸಹಿತ ಪರಾರಿಯಾಗಿ ಅಕ್ಬರ್ ಅಲಿಯನ್ನು ಮದುವೆಯಾಗಿದ್ದಳು‌. ಈ ಹಿನ್ನೆಲೆಯಲ್ಲಿ ಜೋಡಿಯ ವಿರುದ್ಧ 1.90 ಲಕ್ಷ ರೂ. ಬೆಳ್ಳಿ, ಬಂಗಾರ ಕಳವು ಮಾಡಿದ್ದಾಳೆ. ಅಲ್ಲದೆ ತಂದೆ-ತಾಯಿ ದುಡಿದು ಕೂಡಿಟ್ಟಿದ್ದ 90 ಸಾವಿರ ರೂ. ಹಣವನ್ನು ಬ್ಯಾಂಕ್ ಖಾತೆಯಿಂದ ಅಕ್ಬರ್ ಅಲಿ ಖಾತೆಗೆ ಜಮಾ ಮಾಡಿದ್ದಾಳೆಂದು ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಬರ್ಕೆ ಠಾಣೆ ಪೊಲೀಸರು ಅಕ್ಬರ್ ಅಲಿ ಹಾಗೂ ರೇಷ್ಮಾಳನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article