ಅತ್ತೆ ಮನೆಗೆ ಬಂದ ಅಳಿಯ ಮೂರು ಕೊಲೆ ಮಾಡಿ ಪರಾರಿಯಾದ!

ರಾಯಚೂರು: ಅತ್ತೆ ಮನೆಗೆ ಪಾಪಿ‌ ಅಳಿಯನೋರ್ವನು ಪತ್ನಿ, ಅತ್ತೆ ಹಾಗೂ ನಾದಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಮಂಗಳವಾರ ರಾತ್ರಿ ರಾಯಚೂರು ಹೊರವಲಯದ ಯರಮರಸ್ ಕ್ಯಾಂಪ್​ ಎಂಬಲ್ಲಿ ಈ ಭಯಾನಕ ಘಟನೆ ನಡೆದಿದೆ. ವೈಷ್ಣವಿ(25), ಆರತಿ(16), ಸಂತೋಪಿ(45) ಮೃತ ದುರ್ದೈವಿಗಳು.

ಸಾಯಿ ಎಂಬಾತನಿಗೆ 6 ತಿಂಗಳ ಹಿಂದಷ್ಟೇ ವೈಷ್ಣವಿ ಎಂಬ ಯುವತಿಯೊಂದಿಗೆ ಮದುವೆಯಾಗಿತ್ತು. ಮದುವೆಯ ಬಳಿಕ ಸಾಯಿ ಹಾಗೂ ವೈಷ್ಣವಿ ನಡುವೆ ದಿನವೂ ಜಗಳವಾಗುತ್ತಿತ್ತು. ಇದರಿಂದ ವೈಷ್ಣವಿ ತವರು ಮನೆ ಸೇರಿದ್ದಳು. ಇದೇ ವಿಚಾರ ಮಾತನಾಡಲು ಅತ್ತೆ ಮನೆಗೆ ಬಂದಿದ್ದ ಸಾಯಿ ಜಗಳ ಕಾದಿದ್ದಾನೆ. ಈ ಸಂದರ್ಭ ಕೋಪಗೊಂಡ ಸಾಯಿ ಪತ್ನಿ, ಅತ್ತೆ, ನಾದಿನಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದಾನೆ. 

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಢಾಯಿಸಿದ್ದ ರಾಯಚೂರು ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. 

BREAKING NEWS
Loading latest news...
Join our WhatsApp Channel Powered By : Online Pudu