-->
 ದೇವಾಲಯಗಳ ಧ್ವಂಸದಿಂದ ಬಿಜೆಪಿ ಬಣ್ಣ ಬಯಲು- ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ  ಹರೀಶ್ ಕುಮಾರ್ (video)

ದೇವಾಲಯಗಳ ಧ್ವಂಸದಿಂದ ಬಿಜೆಪಿ ಬಣ್ಣ ಬಯಲು- ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ (video)
ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ದೇವಾಲಯಗಳನ್ನು  ಧ್ವಂಸ ಮಾಡುತ್ತಿದ್ದು ಇದೀಗ ಅದರ ಬಣ್ಣ ಬಯಲಾಗಿದೆ  ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ವಿಧಾನಪರಿಷತ್ ಸದಸ್ಯ  ಹರೀಶ್ ಕುಮಾರ್ ಟೀಕಿಸಿದರು.
ಮಂಗಳೂರಿನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯು ತಮ್ಮನ್ನು ರ‍್ಮರಕ್ಷಕರು ಎಂದು ಬಿಂಬಿಸುತ್ತಾ , ಹಿಂದುಗಳನ್ನು ಗುತ್ತಿಗೆ ತೆಗೆದುಕೊಂಡಂತೆ ಮಾಡುತ್ತಿದ್ದರು.  ಆ ಪಕ್ಷವು ಹಿಂದುಗಳ ಹೆಸರಿನಲ್ಲಿ, ಜನರ ಭಾವನೆ ಕೆರಳಿಸಿ ತಮ್ಮ  ಸರಕಾರ ರಚಿಸಿದೆ. ಅಧಿಕಾರಕ್ಕೆ ಬಂದ ಬಳಿಕ ದೇವಾಲಯ ಧ್ವಂಸ ಮಾಡಲು ಹೊರಟಿದ್ದಾರೆ. ದೇವಸ್ಥಾನಗಳನ್ನು ಧ್ವಂಸ ಮಾಡುವ ದೃಶ್ಯವನ್ನು ಟಿವಿಗಳಲ್ಲಿ ನೋಡುವ ವೇಳೆ ಮನಕಲಕುತ್ತದೆ ಎಂದು ಹೇಳಿದರು

ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಂತೆ ರ‍್ತಿಸುತ್ತಿದ್ದ ಬಿಜೆಪಿ ಸುಪ್ರೀಂಕರ‍್ಟ್ ತೋರಿಸಿ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವ ಸಂರ‍್ಭದಲ್ಲಿ ಯಾವ ಜಿಲ್ಲಾಧಿಕಾರಿಗಳು ದೇವಸ್ಥಾನ ಧ್ವಂಸ ಮಾಡಲು ಧರ‍್ಯ ಮಾಡಲಾರರು.  ಇದನ್ನು ಸರಕಾರದ ಪ್ರಾಯೋಜಕತ್ವದಲ್ಲಿ  ಕೆಡವಲಾಗಿದೆ ಎಂದು ಟೀಕಿಸಿದರು

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿಯೂ ದೇವಾಲಯ ಧ್ವಂಸ ಮಾಡಲು ಸುಪ್ರೀಂಕರ‍್ಟ್ ಸೂಚನೆ ನೀಡಿದ್ದರೂ  ನಮ್ಮ ಸರಕಾರ ಅದನ್ನು ಮಾಡಿರಲಿಲ್ಲ. ಬಿಜೆಪಿ  ಸರಕಾರ ಇದರ ಸೂಕ್ಷ್ಮತೆಯನ್ನು ಸುಪ್ರೀಂ ಕರ‍್ಟ್ಗೆ ಮನವರಿಕೆ ಮಾಡಬೇಕು ಮತ್ತು ದೇವಸ್ಥಾನ ಧ್ವಂಸ ಮಾಡುವುದನ್ನು ತಡೆಯಬೇಕು. ಈಗಾಗಲೇ ಆಗಿರುವ ಪ್ರಮಾದಕ್ಕೆ ಕ್ಷಮೆಯನ್ನು ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.Ads on article

Advertise in articles 1

advertising articles 2

Advertise under the article

holige copy 1.jpg