ಸ್ಮಾರ್ಟ್ ಗ್ಲಾಸ್ ಪರಿಚಯಿಸಿದ ಫೇಸ್ಬುಕ್...ಇಲ್ಲಿದೆ ನೋಡಿ ರೇಬನ್ ಸ್ಟೊರೀಸ್ ಸ್ಮಾರ್ಟ್ ಗ್ಲಾಸ್‌ಗಳ ವೈಶಿಷ್ಟ್ಯಗಳು..


ರೇಬನ್ ಗ್ಲಾಸ್ ಕಂಪೆನಿಯ ಸಹಯೋಗದಲ್ಲಿ ಫೇಸ್​ಬುಕ್​ ಸ್ಮಾರ್ಟ್​ ಗ್ಲಾಸ್ ಬಿಡುಗಡೆಯಾಗಿದೆ. ಇದಕ್ಕೆ ರೇಬನ್ ಸ್ಟೊರೀಸ್ ಎಂದು ಹೆಸರಿಡಲಾಗಿದೆ. 

ಈ ಸ್ಮಾರ್ಟ್​ ಗ್ಲಾಸ್ ಧರಿಸಿ ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಬಹುದು. ಹಾಗೆಯೇ, ಸಂಗೀತ ಕೇಳಬಹುದು. ಅದರ ಜೊತೆಗೆ ಫೋನ್ ಕರೆಗಳನ್ನು ಸ್ವೀಕರಿಸುವ ಆಯ್ಕೆಯನ್ನು ಸಹ ಇದರಲ್ಲಿದೆ. ಫೋಟೋ-ವಿಡಿಯೋ ಸೆರೆಹಿಡಿಯಲು ರೇಬನ್ ಸ್ಟೋರೀಸ್ ಸ್ಮಾರ್ಟ್ ಗ್ಲಾಸ್​ನಲ್ಲಿ 5 ಮೆಗಾಪಿಕ್ಸೆಲ್ ಇಂಟಿಗ್ರೇಟೆಡ್ ಕ್ಯಾಮೆರಾವನ್ನು ನೀಡಲಾಗಿದೆ. 

ರೇಬನ್ ಸ್ಟೊರೀಸ್ ಸ್ಮಾರ್ಟ್ ಗ್ಲಾಸ್‌ಗಳ ವೈಶಿಷ್ಟ್ಯಗಳು..

ರೇಬನ್ ಸ್ಟೊರೀಸ್​ನಲ್ಲಿ ಇನ್​ಬಿಲ್ಟ್​ ಸ್ಪೀಕರ್‌ಗಳನ್ನು ನೀಡಲಾಗಿದೆ. ಹಾಗೆಯೇ ಇದು ಮೂರು ಮೈಕ್ರೊಫೋನ್ ಆಡಿಯೋ ಇರೇಗಳನ್ನು ಹೊಂದಿದೆ. ಅದು ಕರೆಗಳು ಮತ್ತು ವೀಡಿಯೊಗಳಿಗೆ ಉತ್ತಮ ಧ್ವನಿ ಮತ್ತು ಧ್ವನಿ ಪ್ರಸರಣವನ್ನು ಒದಗಿಸುತ್ತದೆ. ಕಂಪನಿಯು ಸ್ಮಾರ್ಟ್ ಗ್ಲಾಸ್‌ಗಳಲ್ಲಿ ಬೀಮ್‌ಫಾರ್ಮಿಂಗ್ ತಂತ್ರಜ್ಞಾನವನ್ನು ಬಳಸಿದ್ದು, ಇದರಿಂದ ಕರೆ ಸಮಯದಲ್ಲಿ ಹಿನ್ನೆಲೆ ಶಬ್ದವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಕರೆ ಧ್ವನಿಯ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.

ರೇಬನ್ ಸ್ಟೊರೀಸ್ ಸ್ಮಾರ್ಟ್​ ಗ್ಲಾಸ್​ ಬಳಸಬೇಕಿದ್ದರೆ ಫೇಸ್‌ಬುಕ್ ವ್ಯೂ ಆ್ಯಪ್‌ನೊಂದಿಗೆ ಕನೆಕ್ಟ್ ಮಾಡಬೇಕಾಗುತ್ತದೆ.