-->
ನಾಗಚೈತನ್ಯ - ಸಮಂತಾ ತಾರಾದಂಪತಿ ದಾಂಪತ್ಯ ಜೀವನ ಬಿರುಕಿಗೆ ಇದು ಕಾರಣವಂತೆ?

ನಾಗಚೈತನ್ಯ - ಸಮಂತಾ ತಾರಾದಂಪತಿ ದಾಂಪತ್ಯ ಜೀವನ ಬಿರುಕಿಗೆ ಇದು ಕಾರಣವಂತೆ?

ಹೈದರಾಬಾದ್​: ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯ ಜೀವನದಲ್ಲಿ ಎದ್ದಿರುವ ಬಿರುಗಾಳಿ ವಿಚ್ಛೇದನ​ ಹಂತಕ್ಕೆ ತಲುಪಿರುವ ಸುದ್ದಿ ಎಲ್ಲೆಡೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ನಾಗಚೈತನ್ಯ ಆಗಲಿ, ಸಮಂತಾ ಆಗಲಿ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ ಇವರಿಬ್ಬರ ನಡುವೆ ಏನೇನೋ ಸರಿಯಿಲ್ಲ ಎಂಬುದು ಕೆಲವೊಂದು ನಡೆಯಿಂದ ಖಚಿವಾದಂತಿದೆ. 

ಇತ್ತೀಚೆಗೆ ನಾಗಾರ್ಜುನ ಬರ್ತಡೇ ಪಾರ್ಟಿಯಲ್ಲಿ ಸಮಂತಾ ಭಾಗವಹಿಸದೆ ಕೇವಲ ಶುಭಾಶಯ ಕೋರಿದ್ದರು. ಅಲ್ಲದೆ ಸಂದರ್ಭ ಬಂದಾಗ ಎಲ್ಲವನ್ನು ಹೇಳುತ್ತೇನೆಂದು ಹೇಳಿ ಸಂದರ್ಶನವೊಂದರಲ್ಲಿ ಸಮಂತಾ ನುಣುಚಿಕೊಂಡಿದ್ದರು. ಅದಲ್ಲದೆ ವಿವಾಹದ ಬಳಿಕ ಎಲ್ಲಿಗೂ ಸಮಂತಾ ಮತ್ತು ನಾಗಚೈತನ್ಯ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಇತ್ತೀಚಿಗೆ ಇಬ್ಬರೂ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ. ಈ ಎಲ್ಲಾ ನಡೆಯಿಂದಲೇ ಇಬ್ಬರ ನಡುವೆ ಏನೇನೂ ಸರಿಯಿಲ್ಲ ಎಂಬ ಚರ್ಚೆಗೆ ಪುಷ್ಠಿ ನೀಡುತ್ತಿದೆ. 

ಸಮಂತಾ ಹಾಗೂ ನಾಗಚೈತನ್ಯ ನಡುವಿನ ವೈಮನಸ್ಸಿಗೆ ಕಾರಣಗಳೇನಿರಬಹುದು ಎಂಬ ವಿಚಾರದ ಕಡೆ ಗಮನಹರಿಸಿದ್ದಲ್ಲಿ ಕೆಲವೊಂದು ವಿಚಾರಗಳು ಬೆಳಕಿಗೆ ಬರುತ್ತಿದೆ. ಮೂಲಗಳ ಪ್ರಕಾರ ಸಮಂತಾ ಇತ್ತೀಚೆಗೆ ತುಂಬಾ ಬೋಲ್ಡ್​ ಆಗಿ ಕಾಣಿಸಿಕೊಳ್ಳುತ್ತಿರುವುದು ಅಕ್ಕಿನೇನಿ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ತುತ್ತಾಗಿದ್ದು, ಇರುಸು ಮುರುಸು ಕಾರಣವಾಗಿದೆ ಎನ್ನಲಾಗಿದೆ. ಫೋಟೋ ಶೂಟ್, ಸಿನಿಮಾ ಏನೇ ಇರಬಹುದು ಸಮಂತಾ ಕಡಿಮೆ ಬಟ್ಟೆ ತೊಟ್ಟು ಮೈಮಾಟ ಪ್ರದರ್ಶಿಸುವುದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

ಅಲ್ಲದೆ ಮದುವೆಯ ಬಳಿಕ ಸಮಂತಾ ಅತ್ತೆ ಅಮಲಾ ಅಕ್ಕಿನೇನಿಯಂತೆ ಇರಬೇಕೆಂಬುದು ನಾಗ ಚೈತನ್ಯ ಮತ್ತು ನಾಗಾರ್ಜುನರ ಬಯಕೆಯಾಗಿತ್ತು. ಆದರೆ ಸಮಂತಾ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಿರುವುದೇ ಕುಟುಂಬದಲ್ಲಿ ಮನಸ್ತಾಪಕ್ಕೆ ಕಾರಣವಾಗಿದೆ ಎನ್ನಲಾಗಿದೆ. 

ಇತ್ತಿಚೆಗೆ ತೆರೆಕಂಡ “ದಿ ಫ್ಯಾಮಿಲಿ ಮ್ಯಾನ್​ 2” ವೆಬ್​ ಸರಣಿಯಲ್ಲಿ ತುಂಬಾ ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಂಡ ರೀತಿ ಕೂಡ ಅಕ್ಕಿನೇನಿ ಕುಟುಂಬದ ಮನಸ್ತಾಪಕ್ಕೆ ಒಂದು ಕಾರಣವಾಗಿದೆ. ಸರಸ ಸಲ್ಲಾಪ ದೃಶ್ಯದಲ್ಲಿ ಅರಬೆತ್ತಲೆಯಾಗಿ ಸಮಂತ ಮೈಮಾಟ ಪ್ರದರ್ಶಿಸಿರುವುದು ಅಕ್ಕಿನೇನಿ ಕುಟುಂಬಕ್ಕೆ ಬೇಸರ ತರಿಸಿದೆ ಎಂದು ಚರ್ಚೆಯಾಗುತ್ತಿದೆ.


 ಈಗಾಗಲೇ ಸಮಂತಾ ಮತ್ತು ನಾಗಚೈತನ್ಯರ ವಿಚಾರ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಆಪ್ತ ಸಮಾಲೋಚನೆ ನಡೆದಿದೆ. ಆದರೂ ಇಬ್ಬರ ಮನಸ್ಸು ಎಲ್ಲೂ ಬದಲಾವಣೆಯಾಗಿಲ್ಲ. ಅಲ್ಲದೆ ಇಬ್ಬರೂ ಬೇರೆಯಾಗುದಕ್ಕೆ ಬಯಸಿರುವುದಾಗಿ ತಿಳಿದುಬಂದಿದೆ. ವಿಚ್ಛೇದನ​ ಪಡೆಯಲೇಬೇಕೆಂಬ ದೃಢ ನಿರ್ಧಾರವನ್ನು ಇಬ್ಬರೂ ಮಾಡಿದ್ದು, ಇನ್ನು 2-3 ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿದು ಇಬ್ಬರೂ ಬೇರೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಆಪ್ತ ಮೂಲಗಳಿಗೆ ಮಾಹಿತಿ ಬಂದಿದೆ. 

Ads on article

Advertise in articles 1

advertising articles 2

Advertise under the article