ಓರ್ವನಿಗೋಸ್ಕರ ಮೂವರು ಯುವತಿಯರ ಕಿತ್ತಾಟ: ಹೊಡೆದಾಟದ ವೀಡಿಯೋ ವೈರಲ್

ಮುಜಾಫರ್​ಪುರ್​(ಬಿಹಾರ): ಓರ್ವ ಬಾಯ್ ಫ್ರೆಂಡ್ ಗೋಸ್ಕರ ಮೂವರು ಯುವತಿಯರು ಕಿತ್ತಾಟ ನಡೆಸಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಬಿಹಾರದ ಮುಜಾಫರ್​ಪುರದ ಮೋತಿಲಾಲ್​​ ಪ್ರದೇಶದಲ್ಲಿನ ಮಾಲ್​​ ಮುಂದೆ ನಡೆದಿದೆ.




ಮೂವರೂ ಯುವತಿಯರು ಓರ್ವ ಬಾಯ್ ಫ್ರೆಂಡ್ ನೊಂದಿಗೆ ಮಾಲ್ ಗೆ ಬಂದಿದ್ದರು. ಈ ಸಂದರ್ಭ ಮೂವರು ಯುವತಿಯರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಕಿತ್ತಾಟ ಶುರುವಾಗಿದೆ. ಈ ಮೂವರ ನಡುವಿನ ರಂಪಾಟವನ್ನು ಬಿಡಿಸಲು ಹೋಗಿರುವ ಗೆಳೆಯನಿಗೆ 'ನೀನು ದೂರ ಇರು, ಇದು ನಮ್ಮ ನಡುವಿನ ಜಗಳ' ಎಂದು ಆತನನ್ನು ದೂರವಿಟ್ಟಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿಯೇ ಮೂವರು ಯುವತಿಯರ ನಡುವಿನ ಜಗಳ ತಾರಕಕ್ಕೇರುತ್ತಿದ್ದಂತೆ ಸ್ಥಳದಲ್ಲಿ  ಫುಲ್ ಜನ ಜಮಾಯಿಸಿದ್ದಾರೆ. ಅಲ್ಲದೆ ಇವರು ಪರಸ್ಪರ ಕಿತ್ತಾಟ ನಡೆಸುವ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಾರೆ. ಬಳಿಕ ಅಲ್ಲಿದ್ದ ವ್ಯಕ್ತಿಯೋರ್ವ ಇವರಿಗೆ ಗದರಿಸಿದ್ದು, ನಾಲ್ವರೂ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮೂವರು ಯುವತಿಯರು ಓರ್ವ ಭಾಯ್​ಫ್ರೆಂಡ್​ಗೋಸ್ಕರ ಈ ರೀತಿ ಕಿತ್ತಾಡಿಕೊಂಡು ಹೊಡೆದಾಡಿದ್ದಾರೆ ಎಂದು ಹೇಳಲಾಗುತ್ತಿದೆ.