-->
ಶಾಲಾ ವಿದ್ಯಾರ್ಥಿಗಳಿಬ್ಬರ ಬ್ಯಾಂಕ್ ಖಾತೆಗೆ ಜಮೆಯಾಯಿತು ಬರೋಬ್ಬರಿ 960 ಕೋಟಿ ರೂ.: ಮುಂದೇನಾಯ್ತು ಗೊತ್ತೇ?

ಶಾಲಾ ವಿದ್ಯಾರ್ಥಿಗಳಿಬ್ಬರ ಬ್ಯಾಂಕ್ ಖಾತೆಗೆ ಜಮೆಯಾಯಿತು ಬರೋಬ್ಬರಿ 960 ಕೋಟಿ ರೂ.: ಮುಂದೇನಾಯ್ತು ಗೊತ್ತೇ?

ಕತಿಹಾರ್​(ಬಿಹಾರ): ಬಿಹಾರದಲ್ಲಿ  ಮತ್ತೆ ಬ್ಯಾಂಕ್​ ಖಾತೆಗಳಿಗೆ ಭಾರೀ ಪ್ರಮಾಣದಲ್ಲಿ ಹಣ ಜಮೆಯಾಗಿ ಸುದ್ದಿಯಾಗಿದೆ‌. ವ್ಯಕ್ತಿಯೋರ್ವನ ಬ್ಯಾಂಕ್​ ಖಾತೆಗೆ 5.5 ಲಕ್ಷ ರೂ.‌ಹಣ ಜಮೆಯಾಗಿ ಆತ ಖರ್ಚು ಮಾಡಿ‌ ಅದು ಭಾರೀ ಮಟ್ಟದಲ್ಲಿ ಸುದ್ದಿಯಾಗಿತ್ತು‌. ಇದೀಗ ಅದರ ಬೆನ್ನಲ್ಲೇ ಇಬ್ಬರು ಶಾಲಾ ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಗೆ ಬರೋಬ್ಬರಿ 960 ಕೋಟಿ ರೂ. ಜಮೆಯಾಗಿರುವ ಘಟನೆ ನಗರ ಕತಿಹಾರ​ದ ಅಜಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಷ್ಟೊಂದು ಭಾರೀ ಮೊತ್ತದ ಹಣ ವಿದ್ಯಾರ್ಥಿಗಳ ಜಮೆಯಾಗುತ್ತಿದ್ದಂತೆ  ಪೋಷಕರ ಜೊತೆಗೆ ಬ್ಯಾಂಕ್​​ ಅಧಿಕಾರಿಗಳೂ ಕೂಡಾ ಅಚ್ಚರಿಗೊಳಗಾಗಿದ್ದಾರೆ. ಪಾಸ್ಟಿಯಾ ಹಳ್ಳಿಯಲ್ಲಿರುವ ವಿದ್ಯಾರ್ಥಿಗಳಾದ ಗುರು ಚರಣ್​ ವಿಶ್ವಾಸ್​ ಖಾತೆಗೆ 905 ಕೋಟಿ ರೂ. ಹಾಗೂ ಆಶಿಶ್ ಖಾತೆಗೆ 60,20,11 ಕೋಟಿ ರೂ. ಹಣ ಜಮೆಯಾಗಿದೆ.

ಹಣ ಜಮೆಯಾಗುತ್ತಿದ್ದಂತೆ ಗ್ರಾಮೀಣ ಬ್ಯಾಂಕ್​​ ಶಾಖೆಯ ವ್ಯವಸ್ಥಾಪಕ ಮನೋಜ್ ಗುಪ್ತಾ ಇಬ್ಬರು ವಿದ್ಯಾರ್ಥಿಗಳ ಬ್ಯಾಂಕ್​ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಜೊತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ

ಈ ಕುರಿತು ಕತಿಹಾರ್​ ಜಿಲ್ಲಾ ಮ್ಯಾಜಿಸ್ಟ್ರೇಟ್ ಉದಯನ್​ ಮಿಶ್ರಾ ಬ್ಯಾಂಕ್​​ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಆಗ ಮಾಹಿತಿ ಪ್ರಕಾರ ತಿಳಿದು ಬಂದಂತೆ, ತಾಂತ್ರಿಕ ದೋಷದಿಂದಾಗಿ ಮಿನಿ ಸ್ಟೇಟ್ ಮೆಂಟ್ ನಲ್ಲಿ ಈ ರೀತಿಯಲ್ಲಿ ಭಾರೀ ಮೊತ್ತ ಜಮೆಯಾದಂತೆ ಕಾಣಿಸುತ್ತಿದೆ ಎನ್ನಲಾಗಿದೆ. ಇದೀಗ ಈ ಸುದ್ದಿ ಎಲ್ಲೆಡೆ ವೈರಲ್​ ಆಗುತ್ತಿದೆ.

Ads on article

Advertise in articles 1

advertising articles 2

Advertise under the article