Udupi DC Transfered- ಉಡುಪಿಗೆ ಹೊಸ ಜಿಲ್ಲಾಧಿಕಾರಿ ಜಗದೀಶ್ ವರ್ಗಾವಣೆ, ಕೂರ್ಮ ರಾವ್ ನೂತನ ಡಿಸಿ




ಉಡುಪಿ ಜಿಲ್ಲಾಧಿಕಾರಿಯನ್ನು ಬದಲಾಯಿಸಲಾಗಿದೆ. ಎರಡು ವರ್ಷಗಳ ಕಾಲ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜಿಲ್ಲೆಯನ್ನು ಸಮರ್ಥವಾಗಿ ಮುನ್ನಡೆಸಿದ ಜಿ. ಜಗದೀಶ್ ಅವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.


ವರ್ಗಾವಣೆ ಮಾಡಲಾಗಿರುವ ಜಿ. ಜಗದೀಶ್ ಅವರ ಸ್ಥಾನಕ್ಕೆ ಕಲಬುರ್ಗಿ ಕರ್ನಾಟಕ ರಾಜ್ಯ ರಸ್ತೆ ಸಾಗಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೂರ್ಮ ರಾವ್ ಅವರನ್ನು ನೇಮಿಸಲಾಗಿದೆ.


2019ರಲ್ಲಿ ಉಡುಪಿ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಜಿ. ಜಗದೀಶ್, ಕೋವಿಡ್ ಸಂಕಷ್ಟ, ಮಳೆಯಂತ ಪ್ರವಾಹದ ಸಂದರ್ಭದಲ್ಲಿ ಯಶಸ್ವಿಯಾಗಿ ಆಡಳಿತ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಜೊತೆಗೆ ಒಂದಷ್ಟು ಟೀಕೆಗೂ ಗುರಿಯಾಗಿದ್ದರು.