-->
Indian Idol Nihal Tauro- ಇಂಡಿಯನ್ ಐಡಲ್ ಸ್ಟಾರ್ ನಿಹಾಲ್ ತಾವ್ರೊಗೆ ಹುಟ್ಟೂರ ಸನ್ಮಾನ: ರಮಾನಾಥ ರೈ ಅಭಿನಂದನೆ

Indian Idol Nihal Tauro- ಇಂಡಿಯನ್ ಐಡಲ್ ಸ್ಟಾರ್ ನಿಹಾಲ್ ತಾವ್ರೊಗೆ ಹುಟ್ಟೂರ ಸನ್ಮಾನ: ರಮಾನಾಥ ರೈ ಅಭಿನಂದನೆ

ಸೋನಿ ಟಿವಿ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ 'ಇಂಡಿಯನ್ ಐಡಲ್' 12ನೇ ಆವೃತ್ತಿಯಲ್ಲಿ ಕರ್ನಾಟಕದ ಏಕೈಕ ಸ್ಪರ್ಧಿಯಾಗಿದ್ದ ಕರಾವಳಿಯ ಹೆಮ್ಮೆಯ ಗಾಯಕ

ನಿಹಾಲ್ ತಾವ್ರೋ ಅವರನ್ನು ಹುಟ್ಟೂರಿನಲ್ಲಿ ಸನ್ಮಾನ ಮಾಡಲಾಯಿತು.

ಈ ಸ್ಪರ್ಧೆಗೆ ಆಯ್ಕೆಯಾಗಿದ್ದ ತಾವ್ರೋ ಟಾಪ್ 5 ಸ್ಥಾನ ಪಡೆದಿದ್ದರು. ಮೂಲತಃ ಮೂಡಬಿದಿರೆಯ ನಿಹಾಲ್ ತಾವ್ರೋ ನಿವಾಸಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ರೈ ತಾವ್ರೋ ಅವರ ಸಾಧನೆಯನ್ನು ಮೆಚ್ಚಿದರು. ಮುಕ್ತ ಕಂಠದಿಂದ ಪ್ರಶಂಸೆ ಮಾಡಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್, ಮಂಗಳೂರು ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ನವೀನ್ ಡಿಸೋಜ, ಕಾಂಗ್ರೆಸ್ ಮಹಿಳಾ ಘಟಕದ ಪ್ರಮುಖರಾದ ಪ್ರತಿಭಾ ಕುಳಾಯಿ, ಪ್ರಸಾದ್ ಜೈನ್, ಡೆಂಜಿಲ್ ನೊರೋನ್ಹಾ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article