-->

action sought against Pvt Schools- ಕನಿಷ್ಟ ವೇತನ, ಸೇವಾ ಭದ್ರತೆ: ಖಾಸಗಿ ಶಿಕ್ಷಕರ ಬಳಗದಿಂದ ದಕ್ಷಿಣ ಕನ್ನಡ ಡಿಸಿಗೆ ಮನವಿ

action sought against Pvt Schools- ಕನಿಷ್ಟ ವೇತನ, ಸೇವಾ ಭದ್ರತೆ: ಖಾಸಗಿ ಶಿಕ್ಷಕರ ಬಳಗದಿಂದ ದಕ್ಷಿಣ ಕನ್ನಡ ಡಿಸಿಗೆ ಮನವಿ




ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯನ್ನು ಕಲ್ಪಿಸುವಂತೆ ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ) ಒತ್ತಾಯಿಸಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಅವರನ್ನು ಭೇಟಿ ಮಾಡಿದ ನಿಯೋಗ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದೆ.


ರಾಜ್ಯದಲ್ಲಿ ಹಲವು ಖಾಸಗಿ ಶಾಲೆಗಳು ನಿಯಮಬಾಹಿರವಾಗಿ ನಡೆಯುತ್ತಿದೆ. ಇಂತಹ ಶಾಲೆಗಳ ಮೇಲೆ ಡೇರಾ ಪ್ರಾಧಿಕಾರದ ಅಡಿ ಕಠಿಣ ಕ್ರಮ ಜರುಗಿಸುವಂತೆ ಬಳಗದ ಪರವಾಗಿ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಮಾಡಿದೆ.


ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರರವರು ಶಿಕ್ಷಕರ ಸಮಸ್ಯೆಯನ್ನು ಆಲಿಸಿದ ಬಳಿಕ 'ಡೇರಾ' ಪ್ರಾಧಿಕಾರದ ಅಡಿಯಲ್ಲಿ ಸಾಧ್ಯವಿರುವ ಕ್ರಮವನ್ನು ತೆಗೆದುಕೊಳ್ಳುತ್ತೇನೆಂದು ಭರವಸೆ ನೀಡಿದರು.



ಈ ಸಂದರ್ಭದಲ್ಲಿ ಅರವಿಂದ ಶ್ಯಾನಭಾಗ, ರಾಧಾಕೃಷ್ಣ ಪ್ರಭು, ಇಸ್ಮಾಯಿಲ್ ಬ್ಯಾರಿ, ಜೋಯಲ್ ಪಿಂಟೊ ಮತ್ತಿತರರು ಹಾಜರಿದ್ದರು.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article