ಎರಡನೇ ಅಲೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಕೊರೋನಾ ಸೋಂಕು ಸಾವಿರಕ್ಕೆ ಇಳಿದಿದೆ. ಸೋಮವಾರ ಕೇವಲ 1065 ಮಂದಿ ಸೋಂಕು ದೃಢಪಟ್ಟಿದ್ದು, 28 ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಅತಿ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಾದದ್ದು ಮಾತ್ರ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದಲ್ಲಿ.. 284 ಸೋಂಕಿತರು ಹಾಗೂ ಐದು ಸಾವು ಸಂಭವಿಸಿದ್ದು, ಇದು ಕೂಡ ರಾಜ್ಯದಲ್ಲೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ.
ಎರಡನೇ ಸ್ಥಾನ ಬೆಂಗಳೂರು ನಗರದಲ್ಲಿ ಇದ್ದು, ಇಲ್ಲಿ 270 ಮಂದಿಗೆ ಸೋಂಕು ತಗುಲಿದೆ. ನಾಲ್ಕು ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ.
ಮೂರನೇ ಸ್ಥಾನ ಉಡುಪಿಯದ್ದಾಗಿದ್ದು, ಇಲ್ಲಿ ಮಾತ್ರ ಯಾರೂ ಬಲಿಯಾಗಿಲ್ಲ.
ಹಾಸನದಲ್ಲಿ 54, ಮೈಸೂರಿನಲ್ಲಿ 63, ಚಿಕ್ಕಮಗಳೂರಿನಲ್ಲಿ 22, ಕೊಡಗಿನಲ್ಲಿ 34 ಮತ್ತು ಉತ್ತರ ಕನ್ನಡದಲ್ಲಿ 38 ಶಿವಮೊಗ್ಗದಲ್ಲಿ 45 ಸೋಂಕು ದಾಖಲಾಗಿದೆ.
ಉಳಿದಂತೆ ಇತರ ಜಿಲ್ಲೆಗಳ ಪಟ್ಟಿ ಇಲ್ಲಿದೆ...

