ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕು ಭಾರೀ ಏರಿಕೆ ಕಂಡಿದೆ.
ರಾಜ್ಯದಲ್ಲಿ ಒಟ್ಟು 1769 ಹೊಸ ಕೇಸುಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 411 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 350 ಪ್ರಕರಣಗಳು ದಾಖಲಾಗಿವೆ.
ಮೈಸೂರು ಮತ್ತು ಉಡುಪಿ ನಂತರದ ಸ್ಥಾನ ಪಡೆದಿವೆ. ಮೈಸೂರಿನಲ್ಲಿ 143 ಮತ್ತು ಉಡುಪಿಯಲ್ಲಿ 140 ಪ್ರಕರಣಗಳು ಕಾಣಿಸಿಕೊಂಡಿವೆ.
ಸಾವಿನ ಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಸಿಂಹಪಾಲು ಗಳಿಸಿದೆ. ರಾಜ್ಯದಲ್ಲಿ ಒಟ್ಟು 30 ಸಾವು ಕೋರೋನಾ ಸೋಂಕಿನಿಂದ ಸಂಭವಿಸಿದ್ದು, ಇದರಲ್ಲಿ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು 6 ಸಾವು ಸಂಭವಿಸಿದೆ. ಮೈಸೂರು ಮತ್ತು ಬೆಂಗಳೂರು ನಗರದಲ್ಲಿ ತಲಾ 4 ಸಾವು ಸಂಭವಿಸಿವೆ.
ಕೇವಲ 43 ಹೊಸ ಕೊರೋನಾ ಸೋಂಕು ದಾಖಲಿಸಿರುವ ಮಂಡ್ಯದಲ್ಲಿ ಮೂರು ಸಾವು ಸಂಭವಿಸಿವೆ.