-->

DK again top in corona list- ಮತ್ತೆ ರಾಜ್ಯದಲ್ಲೇ ಟಾಪ್‌: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಕೊರೋನಾ ದುರಂತಗಾಥೆ!

DK again top in corona list- ಮತ್ತೆ ರಾಜ್ಯದಲ್ಲೇ ಟಾಪ್‌: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಕೊರೋನಾ ದುರಂತಗಾಥೆ!




ದಕ್ಷಿಣ ಕನ್ನಡ ಸತತ ಎರಡನೇ ದಿನವೂ ಕೊರೋನಾ ಸೋಂಕಿನಲ್ಲಿ ದುರಂತ ಕಥೆಯ ಮುನ್ನುಡಿ ಬರೆದಿದೆ.


ರಾಜ್ಯದಲ್ಲಿ ಬುಧವಾರ 1826 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಶೇ 25ಕ್ಕಿಂತಲೂ ಹೆಚ್ಚಿನ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ದಾಖಲಾಗಿದೆ. ಸಾವಿನ ಸಂಖ್ಯೆಯಲ್ಲೂ ಕರಾವಳಿ ಜಿಲ್ಲೆ ಬೆಂಗಳೂರು ನಗರದೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 422 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರು ನಗರ 377 ಎರಡನೇ ಸ್ಥಾನ ಪಡೆದಿದೆ. ಅಚ್ಚರಿ ಎಂದರೆ, ಹಾಸನ 175 ಹೊಸ ಪ್ರಕರಣಗಳು ದಾಖಲಾಗಿದ್ದು, ಮೂರನೇ ಸ್ಥಾನಕ್ಕೇರಿದೆ.


ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಉಡುಪಿ(130) ಮತ್ತು ಮೈಸೂರು (118) ನಂತರದ ಸ್ಥಾನವನ್ನು ಪಡೆದುಕೊಂಡಿದೆ.


ನೆಮ್ಮದಿಯ ವಿಚಾರ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗಿದೆ. ಮಂಗಳವಾರ ಶೇ 5ಕ್ಕೆ ಹತ್ತಿರವಿದ್ದ ಈ ದರ ಬುಧವಾರ ಶೇ. 3.85ರಷ್ಟನ್ನು ದಾಖಲಿಸಿದೆ.


ಈ ಮಧ್ಯೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರಾವಳಿಗೆ ಆಗಮಿಸಲಿದ್ದು, ಕೊರೋನಾ ತಡೆಗಟ್ಟಲು ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. 

Ads on article

Advertise in articles 1

advertising articles 2

Advertise under the article