Deal in egg distrubution- ಶಾಲಾ ಮಕ್ಕಳ ಮೊಟ್ಟೆ ಖರೀದಿ ಡೀಲ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸಚಿವೆ ಶಶಿಕಲಾ ಜೊಲ್ಲೆ ಮನೆಗೆ ಮೊಟ್ಟೆ ಎಸೆತ!




ಶಾಲಾ ಮಕ್ಕಳ ಮೊಟ್ಟೆ ಖರೀದಿ ಡೀಲ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಸಚಿವೆ ಶಶಿಕಲಾ ಜೊಲ್ಲೆ ಮನೆಗೆ ಮೊಟ್ಟೆ ಎಸೆತ!



ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮಾತೃಪೂರ್ಣ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.



ಕನ್ನಡ ಸುದ್ದಿವಾಹಿನಿಯೊಂದು ನಡೆಸಿದ ಸ್ಟಿಂಗ್ ಆಪರೇಷನ್ ಬಳಿಕ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸ್ಥಳೀಯ ಶಾಸಕರೊಬ್ಬರು ಕೋಟಿಗಟ್ಟಲೆ ಡೀಲ್ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.



ಈ ಭ್ರಷ್ಟಾಚಾರ ಆರೋಪ ರಾಜಕೀಯ ವಲಯದಲ್ಲಿ ಭಾರೀ ತಲ್ಲಣ ಮೂಡಿಸಿದೆ.

ಇದೇ ವೇಳೆ, ಮೊಟ್ಟೆ ಖರೀದಿ ಮತ್ತು ಹಂಚಿಕೆಯಲ್ಲಿ ಭ್ರಷ್ಟಾಚಾರ ಎಸಗಿದ ಆರೋಪ ಹೊತ್ತಿರುವ ಸಚಿವೆ ಜೊಲ್ಲೆ ಅವರ ಮನೆಗೆ ಎನ್ ಎಸ್ ಯು ಐ ಕಾರ್ಯಕರ್ತರು ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ್ದಾರೆ.



ಮಕ್ಕಳ ಹೊಟ್ಟೆ ಸೇರುವ ಪೌಷ್ಟಿಕ ಮೊಟ್ಟೆಯಲ್ಲೇ ದೊಡ್ಡ ಮಟ್ಟದ ಡೀಲ್ ಕುದುರಿಸಿಕೊಂಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಭ್ರಷ್ಟಾಚಾರ ನಡೆಸಿರುವುದು ಸ್ಟಿಂಗ್ ಆಪರೇಷನ್ ನಲ್ಲಿ ಬಯಲಾಗಿತ್ತು.



ಭ್ರಷ್ಟ್ರಾಚಾರಿ ಎಂಬ ಆರೋಪ ಹೊತ್ತಿರುವ ಶಶಿಕಲಾ ಜೊಲ್ಲೆ ಅವರ ನಿವಾಸದ ಪ್ರವೇಶ ದ್ವಾರಕ್ಕೆ ವಿದ್ಯಾರ್ಥಿ ನಾಯಕರು ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದರು.



ಸಚಿವೆ ಜೊಲ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಶಶಿಕಲಾ ಜೊಲ್ಲೆ ವಿರುದ್ಧ ಘೋಷಣೆ ಕೂಗಿ ಮೊಟ್ಟೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.