Corona Update- ರಾಜ್ಯದಲ್ಲಿ ಸೋಂಕಿನ ಪ್ರಮಾಣ ದಿಢೀರ್ ಏರಿಕೆ: ಕರಾವಳಿಯಲ್ಲಿ ಬಹುತೇಕ ದ್ವಿಗುಣ!





ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಪ್ರಕರಣ ದಿಢೀರ್ ಏರಿಕೆ ಕಂಡಿದೆ. ಇಂದು 1913 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, 93 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 2489 ಮಂದಿ ಸೋಂಕಿನಿಂದ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪಾಸಿಟಿವಿಟಿ ದರದಲ್ಲೂ ಏರಿಕೆಯಾಗಿದ್ದು, ನಿನ್ನೆ ಶೇ. 1.26ರಷ್ಟಿದ್ದ ದರ ಇಂದು ಶೇ. 1.53ಕ್ಕೇರಿದೆ.





ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೋನಾ ಸೋಂಕು ದಿಢೀರ್ ಏರಿಕೆ ಕಂಡಿದ್ದು, ಸೋಂಕಿತರ ಸಂಖ್ಯೆಯಲ್ಲಿ ಬಹುತೇಕ ದ್ವಿಗುಣಗೊಂಡಿದೆ. 



ನಿನ್ನೆ ಕೇವಲ 126 ಮಂದಿಯಲ್ಲಿ ಕೊರೋನಾ ಸೋಂಕು ಲಕ್ಷಣಗಳು ಪತ್ತೆಯಾಗಿತ್ತು. ಇಂದು 222 ಮಂದಿಗೆ ಸೋಂಕು ದೃಢಪಟ್ಟಿದೆ. ನಿನ್ನೆ 289 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದರೆ, ಇಂದು 260 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 



ಜಿಲ್ಲೆಯಲ್ಲಿ ಪಾಸಿಟಿವಿಟಿ ದರದಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ಇಂದು ಪಾಸಿಟಿವಿಟಿ ದರ ಶೇ. 3.13 ಆಗಿದ್ದು, ನಿನ್ನೆ ಪಾಸಿಟಿವಿಟಿ ದರ ಶೇ. 2.19ಕ್ಕೆ ಆಗಿತ್ತು.


ಆದರೆ, ಸೋಂಕಿನಿಂದ ಇಂದು 9 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ, ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಸಾವಿನ ಸಂಖ್ಯೆ 1334ಕ್ಕೇರಿದೆ.





ಉಡುಪಿ ಜಿಲ್ಲೆಯಲ್ಲೂ ಸೋಂಕು ಏರಿಕೆ ಕಂಡುಗಂದಿದೆ. ಇಂದು 95 ಮಂದಿಗೆ ಸೋಂಕು ತಗುಲಿದ್ದು, ನಿನ್ನೆ 66 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಕೋವಿಡ್‌ ಸೋಂಕಿಗೆ ಯಾರೂ ಬಲಿಯಾಗಿಲ್ಲ. 


ನಿನ್ನೆ 130 ಮಂದಿ ಸೋಂಕಿನಿಂದ ಮುಕ್ತಿ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಇಂದು ಕೇವಲ 63 ಮಂದಿ ಚಿಕಿತ್ಸೆಯಿಂದ ಸಂಪೂರ್ಣ ಗುಣಮುಖರಾಗಿದ್ಧಾರೆ.

BREAKING NEWS
Loading latest news...
Join our WhatsApp Channel Powered By : Online Pudu