-->
CD fear on Union Minister?- ಸಿಡಿ ಲೀಕ್ ಭೀತಿ: ಕೋರ್ಟ್ ಮೊರೆ ಹೋದ ಕೇಂದ್ರ ಸಚಿವ- ನಿರ್ಬಂಧಕಾಜ್ಞೆ ಹೊರಡಿಸಿದ ಕೋರ್ಟ್

CD fear on Union Minister?- ಸಿಡಿ ಲೀಕ್ ಭೀತಿ: ಕೋರ್ಟ್ ಮೊರೆ ಹೋದ ಕೇಂದ್ರ ಸಚಿವ- ನಿರ್ಬಂಧಕಾಜ್ಞೆ ಹೊರಡಿಸಿದ ಕೋರ್ಟ್

ಬೆಂಗಳೂರು: ಸಿಡಿ ಎಂದರೆ ರಾಜಕಾರಣಿಗಳು ಬೆಚ್ಚಿ ಬೀಳುವಂತಾಗಿದೆ. ಕುಂಬಳಕಾಯಿ ಕಳ್ಳ ಎಂಬ ಗಾದೆಯಂತೆ ರಾಜ್ಯದಲ್ಲಿ ಮತ್ತೊಂದು ಸಿಡಿ ಕಥೆ ಪ್ರಾರಂಭವಾಗಿದೆ. ಈ‌ ಬಾರಿ ಕರಾವಳಿ ಮೂಲದ‌ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಿಗೆ ಆ ಭೀತಿ ಕಾಡಲಾರಂಭಿಸಿದೆ.


ಮಾಧ್ಯಮಗಳಲ್ಲಿ ತನ್ನ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಸುದ್ದಿ ಪ್ರಕಟಿಸದಂತೆ ನಿರ್ಬಂಧಕಾಜ್ಞೆಯನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ ಸದಾನಂದ‌ ಗೌಡ ಪಡೆದುಕೊಂಡಿದ್ದಾರೆ.


ತಮ್ಮ ವಿರುದ್ಧ ಯಾವುದೇ ಸುಳ್ಳು ಯಾ ಮಾನಹಾನಿಕರ ಸುದ್ದಿ ಪ್ರಸಾರ ಮಾಡದಂತೆ ತೇಜೋವಧೆಯಾಗದಂತೆ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಮಾಧ್ಯಮಗಳ ವಿರುದ್ಧ ‘ನಿರ್ಬಂಧಕಾಜ್ಞೆ’ ಪಡೆದಿದ್ದಾರೆ.

ಕೆಲ ಪತ್ರಿಕೆ ಚಾನೆಲ್ ಗಳಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡದಂತೆ, ನಕಲಿ ಸಿಡಿ ಸೃಷ್ಟಿಸಿ ಬಿಡುಗಡೆ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಾಧ್ಯಮಗಳ ವಿರುದ್ಧ ‘ನಿರ್ಬಂಧಕಾಜ್ಞೆ’ ಪಡೆದಿದ್ದಾರೆ.


ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾಗಿದ್ದ ಕರ್ನಾಟಕದ ಸಚಿವ ರಮೇಶ್ ಜಾರಕಿಹೊಳಿಯವ ಲೈಂಗಿಕ ಸಿಡಿ ಪ್ರಕರಣ ರಾಜ್ಯದಲ್ಲಿ ಭಾರೀ ಸುದ್ದು ಮಾ‌ಡಿತ್ತು.


ರಮೇಶ್ ಜಾರಕಿಹೊಳಿ ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆ ಸಂದರ್ಭದಲ್ಲಿ ಮುಂಬೈಯಲ್ಲಿ ವಾಸವಿದ್ದ ಈಗಿನ ಸಚಿವರ ತಂಡ ತಮ್ಮ ಸಿಡಿ ಹೊರ ಬರದಂತೆ ಕೋರ್ಟ್ ಮೂಲಕ ತಡೆ ತಂದಿದ್ದರು.


ಈಗ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರು ಇದೇ ರೀತಿ ತಡೆ ತಂದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

Ads on article

Advertise in articles 1

advertising articles 2

Advertise under the article