-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Mumbai Bunts Sangha- ಮುಂಬೈ ಬಂಟರ ಸಂಘ(ಕೆಬಿಆರ್)ನ ಅಂತರಾಷ್ಟ್ರೀಯ 'ನಾಟ್ಯಸುಧಾ ಸೂಪರ್ ಮ್ಯಾಮ್' ಸ್ಪರ್ಧೆಯ ನಿರ್ಣಾಯಕ ಹಂತ

Mumbai Bunts Sangha- ಮುಂಬೈ ಬಂಟರ ಸಂಘ(ಕೆಬಿಆರ್)ನ ಅಂತರಾಷ್ಟ್ರೀಯ 'ನಾಟ್ಯಸುಧಾ ಸೂಪರ್ ಮ್ಯಾಮ್' ಸ್ಪರ್ಧೆಯ ನಿರ್ಣಾಯಕ ಹಂತ




ಬಂಟರ ಸಂಘ ಮುಂಬಯಿ ಇದರ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗವು ತಾಯಂದಿರಿಗಾಗಿ ಆಯೋಜಿಸಿರುವ `ನಾಟ್ಯಸುಧಾ' `ಸೂಪರ್ ಮ್ಯಾಮ್' ನೃತ್ಯ ಸ್ಪರ್ಧೆಯ ನಿರ್ಣಾಯಕ ಸ್ಪರ್ಧೆ (ಗ್ರ್ಯಾಂಡ್ ಫಿನಾಲೆ) ಆಗಸ್ಟ್ 01ರಂದು ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಸಂಘದ ಹೈಯರ್ ಎಜ್ಯುಕೇಶನ್ ಕಾಲೇಜಿನ ಕಿರು ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ್ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಲಿದೆ.







ಈ ಸ್ಪರ್ಧೆಯಲ್ಲಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 30 ಬಂಟ ಮಹಿಳೆಯರು ಭಾಗವಹಿಸಿದ್ದು, ಎರಡು ಹಂತದ ಆಯ್ಕೆಯ ಸರದಿ ಈಗಾಗಲೇ ಪೂರೈಸಿದ್ದು, ಅಂತಿಮ ಮೂರನೆಯ ಸುತ್ತಿನ ಸೆಣಸಾಟದ ಫೈನಲ್ ಸ್ಪರ್ಧೆಯು10 ಸ್ಪರ್ಧಿಗಳ ನೇರ ನೃತ್ಯ ಸ್ಪರ್ಧೆಯೊಂದಿಗೆ ನಡೆಯಲಿದೆ ಎಂದು ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಗೀತ ಶೆಟ್ಟಿ ತಿಳಿಸಿದ್ದಾರೆ.


ಸ್ಪರ್ಧೆಯು ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ಹೊಂದಿದ್ದು, ಉತ್ತಮ ಭಾವ ಮತ್ತು ಉತ್ತಮ ಉಡುಗೆ ತೊಡುಗೆ ಎಂಬ ವಿಶೇಷ ಬಹುಮಾನದ ಜೊತೆಗೆ, ಮೂರು ಸಮಾಧಾನಕರ ಬಹುಮಾನವನ್ನು ಹೊಂದಿರುತ್ತದೆ. ಈ ಕಾರ್ಯ ಕ್ರಮದ ಝೂಮ್ ಮತ್ತು ಯೂಟ್ಯೂಬ್ ಲಿಂಕನ್ನು ಬಳಸಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಸಮಿತಿಯ ಸಮನ್ವಯಕ ವಿಶ್ವನಾಥ್ ಶೆಟ್ಟಿ ವಿನಂತಿಸಿದ್ದಾರೆ.



ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರೊಂದಿಗೆ ಉಪಾಧ್ಯಕ್ಷ ಉಳ್ತೂರು ಮೋಹನ್‍ದಾಸ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ| ಹರೀಶ್ ಡಿ.ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ದಿವಾಕರ ಶೆಟ್ಟಿ ಮತ್ತು ಸದಸ್ಯರು, ಪ್ರಾದೇಶಿಕ ಸಮಿತಿಯ ಸಮನ್ವಕ ಐಕಳ ಗುಣಪಾಲ ಶೆಟ್ಟಿ, ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಉಪಾಧ್ಯಕ್ಷೆ ಅಮೃತಾ ಎ.ಶೆಟ್ಟಿ, ಕಾರ್ಯದರ್ಶಿ ಡಾ| ಪಲ್ಲವಿ ಆರ್.ಶೆಟ್ಟಿ, ಕೋಶಾಧಿಕಾರಿ ಸರೋಜಿನಿ ಎಸ್.ಶೆಟ್ಟಿ, ಜೊತೆ ಕಾರ್ಯದರ್ಶಿ ವೀಣಾ ಶೆಟ್ಟಿ, ಜೊತೆ ಕೋಶಾಧಿಕಾರಿ ಮಲ್ಲಿಕಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿಕಾಸ್ ರೈ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ನಂದಳಿಕೆ ನಾರಾಯಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು ಎಲ್ಲರ ಸಹಕಾರ ವನ್ನು ಕೋರಿದ್ದಾರೆ. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article