-->

Youth Congress- ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ

Youth Congress- ಯುವ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ




ಮಂಗಳೂರು ನಗರದ ಜಿಲ್ಲಾ ವೆನ್ ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಯುವ ಕಾಂಗ್ರೆಸ್ ನ ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಸವಾನ್ ಎಸ್. ಕೆ. ಹಾಗೂ ರಮಾನಂದ ಪೂಜಾರಿ ಅವರ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಂಗವಿಕಲ ರೋಗಿಗಳಿಗೆ ಉಚಿತ ವಾಕರ್ (ಊರುಗೋಲು )ಗಳನ್ನು ಮತ್ತು ಇನ್ನಿತರ ಸಲಕರಣೆಗಳನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೋ ಅವರು ಹಸ್ತಾಂತರಿಸಿದರು.




ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು, ಕಾಂಗ್ರೆಸ್ ನ ಮುಂಚೂಣಿ ನಾಯಕರಾದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ದಿನ ಯುವ ಕಾಂಗ್ರೆಸ್ ಪದಾಧಿಕಾರಿಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಅಂಗ ವೈಫಲ್ಯ ಇದ್ದವರಿಗೆ ನಡೆಯಲು ಸಹಾಯವಾಗುವ ವಾಕರ್ ಗಳನ್ನು ಮತ್ತು ಇನ್ನಿತರ ಸಲಕರಣೆಗಳನ್ನು ನೀಡುವ ಮೂಲಕ ಜನಮೆಚ್ಚುವ ಕಾರ್ಯ ಕೈಗೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.





ಈ ಕೊಡುಗೆಯಿಂದ ಬಡ ರೋಗಿಗಳಿಗೆ ಬಹಳಷ್ಟು ಸಹಕಾರಿಯಾಗಲಿದೆ. ಅವರ ಜೀವನಕ್ಕೆ ಸಹಕಾರ ಮತ್ತು ಪ್ರೋತ್ಸಾಹ ನೀಡಿದಂತಾಗಿದೆ. ಇದರಿಂದ ಸಂಘಟನೆಗೂ ಒಳ್ಳೆಯ ಹೆಸರು ಮತ್ತು ಇತರ ಯುವಕರಿಗೆ ಇದೊಂದು ಮಾದರಿ ಎಂದು ಶ್ಲಾಘಿಸಿದರು.



ಯುವ ನಾಯಕ ಮಿಥುನ್ ರೈ ಮಾತನಾಡಿ, ರಾಹುಲ್ ಗಾಂಧಿ ಅವರ ಹುಟ್ಟುಹಬ್ಬ ಪ್ರಯುಕ್ತ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್ ನಿಂದ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.



ಜೀವನದ ಸಂಕಷ್ಟಮಯ ಕಾಲದಲ್ಲಿ ಬಡ ಜನರಿಗೆ ಸಹಾಯವಾಗುವಂತಹ ಕಾರ್ಯಕ್ರಮ ನಡೆಸುವುದರ ಮೂಲಕ ಜನ ಮೆಚ್ಚುವ ಕೆಲಸವನ್ನು ಪಕ್ಷ ಮಾಡಿದೆ. ಕೋವಿಡ್ ಲಾಕ್‌ಡೌನ್‌ನಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರ್ಗತಿಕರಿಗೆ ಬೆಳಗಿನ ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಒದಗಿಸುವುದರ ಮೂಲಕ ಬಹಳಷ್ಟು ನೆರವಾಗುವ ಕೆಲಸ ಪಕ್ಷ ಮಾಡುತ್ತಿದೆ ಎಂದು ಮಿಥುನ್ ಹೇಳಿದರು.



ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಪಕ್ಷದ ಪ್ರಮುಖ ನಾಯಕರಾದ ಟಿ. ಕೆ. ಸುಧೀರ್, ನೀರಜ್ ಚಂದ್ರ ಪಾಲ್, ಕೌಶಿಕ್ ಶೆಟ್ಟಿ, ಸಾಜಿದ್, ಉಕ್ಕಾಸ್, ನಾಗೇಂದ್ರ, ನಿತೀನ್ ಆಚಾರ್ಯ, ಗೌತಮ್, ಉದಯ್ ಬೋಳಾರ್, ಕೃತಿನ್ ಕುಮಾರ್, ಆಸ್ಟನ್ ಸಿಕ್ವೇರಾ, ಜೀವನ್ ಮೋರೆ, ಆಸೀಫ್ ಜೆಪ್ಪು, ಶಾನ್ ಡಿಸೋಜಾ ಮೊದಲಾದವರು ಉಪಸ್ಥಿತರಿದ್ದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article