-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
VHP extends help to Church - ಕೋವಿಡ್ ಅಬ್ಬರದಿಂದ ನಲುಗಿದ ಬೆಳ್ತಂಗಡಿಯ ಕ್ರೈಸ್ತ ಆಶ್ರಮ: ನೆರವಿಗೆ ಧಾವಿಸಿದ ವಿಎಚ್‍ಪಿ

VHP extends help to Church - ಕೋವಿಡ್ ಅಬ್ಬರದಿಂದ ನಲುಗಿದ ಬೆಳ್ತಂಗಡಿಯ ಕ್ರೈಸ್ತ ಆಶ್ರಮ: ನೆರವಿಗೆ ಧಾವಿಸಿದ ವಿಎಚ್‍ಪಿ

ಒಂದೇ ದಿನ 210 ಮಂದಿಗೆ ಕೊರೊನಾ ಸೋಂಕು ಹರಡುವ ಮೂಲಕ ದಕ್ಷಿಣ ಕನ್ನಡವನ್ನೇ ಬೆಚ್ಚಿ ಬೀಳಿಸಿದ್ದ ನೆರಿಯಾ ಸಿಯೋನ್ ಆಶ್ರಮದ ನೆರವಿಗೆ ವಿಶ್ವ ಹಿಂದೂ ಪರಿಷತ್ ಧಾವಿಸಿದೆ.







ಅದರ ಬೆಳ್ತಂಗಡಿ ಘಟಕದ ಕಾರ್ಯಕರ್ತರು ಆಶ್ರಮಕ್ಕೆ ಧಾವಿಸಿದ್ದು, ಅಗತ್ಯವಿರುವ ಎಲ್ಲ ಸೇವೆಯನ್ನು ನೀಡಿದ್ದಾರೆ. ಅಲ್ಲದೆ, ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ನೆರವು ಮುಂದುವರಿಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಸ್ಪಷ್ಟಪಡಿಸಿದೆ.'



ಸುಮಾರು 270 ಜನ ನಿರಾಶ್ರಿತರು ಹಾಗೂ ವಯೋವೃದ್ಧರು ಇರುವ ಈ ಆಶ್ರಮದಲ್ಲಿ ಒಂದೇ ದಿನ ಬರೋಬ್ಬರಿ 210 ಮಂದಿಗೆ ಕೊರೋನಾ ಪಾಸಿಟಿವ್ ಆಗಿತ್ತು.



ಈ ಹಿನ್ನೆಲೆಯಲ್ಲಿ ವಿಎಚ್‍ಪಿ ಕಾರ್ಯಕರ್ತರು ಆಶ್ರಮವನ್ನು ಸಂಪೂರ್ಣ ಸ್ಯಾನಿಟೈಸೇಷನ್ ಮಾಡಿದ್ದಾರೆ. ಪಿಪಿಇ ಕಿಟ್ ಧರಿಸಿದ ಕಾರ್ಯಕರ್ತರು ತಮ್ಮ ಸ್ವಂತ ಖರ್ಚಿನಿಂದಲೇ ಆಶ್ರಮ, ಗೋಶಾಲೆಯನ್ನು ಸ್ಯಾನಿಟೈಸೇಷನ್ ಮಾಡಿದ್ದಾರೆ. ಅಲ್ಲದೆ, ಅಲ್ಲಿನ ಗೋವುಗಳ ಆಹಾರ ಆರೈಕೆಗೂ ವ್ಯವಸ್ಥೆ ಮಾಡಿದ್ದಾರೆ.



ಸಿಯೋನ್ ಆಶ್ರಮ ಸಹಜ ಸ್ಥಿತಿಗೆ ಬರುವವರೆಗೂ ಈ ಸೇವೆ ಮುಂದುವರಿಯಲಿದೆ ಎಂದು ವಿಎಚ್‍ಪಿ ನೆರಿಯ ಘಟಕದ ಉಪಾಧ್ಯಕ್ಷರಾದ ದೀಕ್ಷಿತ್ ನೆರಿಯ ಸ್ಪಷ್ಟಪಡಿಸಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article