ದೇವರ ಪ್ರಸಾದ ಅಂದ್ರೆ ಸಾಕು, ಜನರಿಗೆ ಭಯ-ಭಕ್ತಿ. ಈ ಪ್ರಸಾದದ ಬಗ್ಗೆ ಯಾವುದೇ ಭಯ, ಅನುಮಾನಗಳಿಲ್ಲದೇ ಭಕ್ತರು ಅದನ್ನು ತಿನ್ನುತ್ತಾರೆ. ಅದನ್ನು ಹೇಗೆ ತಯಾರಿಸುತ್ತಾರೆ, ಹೇಗೆ ಹಂಚುತ್ತಾರೆ ಎನ್ನುವ ಪ್ರಶ್ನೆಗಳನ್ನೂ ಕೇಳದೇ ನಂಬಿಕೆಯಿಂದ ತಿನ್ನುತ್ತಾರೆ.
ಆದರೆ, ಉತ್ತರಪ್ರದೇಶದ ಗೋವರ್ಧನ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸಂಪ್ರದಾಯದ ಹೆಸರಲ್ಲಿ ನಡೆಯುತ್ತಿರುವ ಪ್ರಸಾದ ಹಂಚಿಕೆ ಪ್ರಕ್ರಿಯೆ ದೈವ ಭಕ್ತರಿಗೆ ಅಸಹ್ಯ ಹುಟ್ಟಿಸುವಂತಿದೆ.
ದೇವಾಲಯಕ್ಕೆ ಬರುವ ಭಕ್ತರಿಗೆ ಕಿಚಡಿ ಪ್ರಸಾದ ವಿತರಣೆ ಮಾಡುತ್ತಿರುವುದು ಸಂಪ್ರದಾಯ. ಈ ವೇಳೆ ಪ್ರಸಾದಕ್ಕೆ ಅರ್ಚಕರು ಉಗುಳಿ ಭಕ್ತರಿಗೆ ಹಂಚುತ್ತಿದ್ದು, ಈ ವಿಡಿಯೋ ನೋಡಿದರೆ, ವಾಕರಿಕೆ ಬರುವುದಂತೂ ಖಂಡಿತ.
ಇಲ್ಲಿನ ಶ್ರೀಧಾಮ ರಾಧಾಕುಂಡದ ಸೇರಿದ ಪ್ರಾಣ್ ಕೃಷ್ಣದಾಸ್ ಮಹಾರಾಜ್ ಎಂಬ ಬಾಬಾ ಈ ರೀತಿಯಾಗಿ ಪ್ರಸಾದ ಹಂಚುತ್ತಿದ್ದಾನೆ. ದೇವರ ಹೆಸರಿನಲ್ಲಿ ಏನು ಕೊಟ್ಟರೂ ಪ್ರಸಾದ ಎಂದು ಸ್ವೀಕರಿಸುವ ಜನರು ಆತ ಉಗುಳಿ ನೀಡಿದ ಕಿಚಡಿಯನ್ನು ಸೇವಿಸುತ್ತಿರುವ ವಿಡಿಯೋವನ್ನು ಅಂತರ್ಜಾಲ ಮಾಧ್ಯಮವೊಂದು ಪೋಸ್ಟ್ ಮಾಡಿದೆ.
ಈ ಬಗ್ಗೆ ಕೇಳಿದರೆ, ಅದು ಇಲ್ಲಿನ ಸಂಪ್ರದಾಯ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ನಂಬಿಕೆಯ ಹೆಸರಿನಲ್ಲಿ ಅರ್ಚಕರು ತಮ್ಮ ಎಂಜಲನ್ನು ಜನರಿಗೆ ತಿನ್ನಿಸುವುದು ಎಷ್ಟೊಂದು ಅಸಹ್ಯಕಾರಿ ಎಂಬ ಪ್ರಶ್ನೆ ಏಳತೊಗಡಗಿದೆ. ಅಂದ ಹಾಗೆ ಈ ವರದಿ ಕೆಲವೇ ಕೆಲವು ಅಂತರ್ಜಾಲ ಮಾಧ್ಯಮಗಳಲ್ಲಿ ಮಾತ್ರವೇ ಪ್ರಕಟವಾಗಿದೆ.
