-->
Renukacharya-  ಸಿಎಂ ಪದಗ್ರಹಣಕ್ಕೆ ಹೊಲಿಸಿದ ಸೂಟ್ ಊರ ಜಾತ್ರೆಗೆ ಹಾಕಿಕೊಳ್ಳಿ: ಅತೃಪ್ತರಿಗೆ ರೇಣು ಟಾಂಗ್‌!!

Renukacharya- ಸಿಎಂ ಪದಗ್ರಹಣಕ್ಕೆ ಹೊಲಿಸಿದ ಸೂಟ್ ಊರ ಜಾತ್ರೆಗೆ ಹಾಕಿಕೊಳ್ಳಿ: ಅತೃಪ್ತರಿಗೆ ರೇಣು ಟಾಂಗ್‌!!
ಬೆಂಗಳೂರು: ಕೆಲವರು ಸಿಎಂ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಸೂಟು ಕೂಡ ಹೊಲಿಸಿಕೊಂಡಿದ್ಧಾರೆ. ಆದರೆ, ಸೂಟು ಬೂಟು ವೇಸ್ಟ್ ಆಗಬಹುದು. ಪರವಾಗಿಲ್ಲ, ಅದನ್ನು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ ಎಂದು ಸಿಎಂ ಯಡಿಯೂರಪ್ಪ ಪರಮಾಪ್ತ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅತೃಪ್ತರಿಗೆ ಟಾಂಗ್ ನೀಡಿದ್ದಾರೆ.


ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಪದಚ್ಯುತಗೊಳಿಸಿ, ಸಿಎಂ ಗಾದಿಗೆ ಏರಲು ಯತ್ನಿಸುತ್ತಿರುವ ಬಿಜೆಪಿ ಶಾಸಕರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೀಡಿದ ತಿರುಗೇಟು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಅತೃಪ್ತರ ರಾಜಕೀಯ ಮೇಲಾಟದ ವಿರುದ್ಧ ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಪರವಾಗಿ ತಾನು 65 ಶಾಸಕರ ಸಹಿ ಸಂಗ್ರಹ ಮಾಡಿರುವುದು ಸತ್ಯ. ಇದರಲ್ಲಿ ಯಾವುದೇ ಅನುಮಾನಗಳು ಬೇಡ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ತಮ್ಮನ್ನು ಭೇಟಿ ಮಾಡಲು ಸಮಯ ನೀಡಿದ್ದಾರೆ. ಆ ಸಂದರ್ಭದಲ್ಲಿ ಎಲ್ಲ ವಿಚಾರ ತಿಳಸುವುದಲ್ಲದೆ, ಶಾಸಕರ ಸಹಿ ಇರುವ ಪತ್ರವನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಅರುಣ್ ಸಿಂಗ್ ಭೇಟಿ ಬಳಿಕ ನಾಯಕತ್ವ ಬದಲಾವಣೆ ಚರ್ಚೆಗೆ ತೆರೆ ಬೀಳಲಿದೆ, ಅಲ್ಲದೆ, ಬಿಎಸ್ ವೈ ವಿರುದ್ಧ ತಂತ್ರಗಾರಿಕೆ ನಡೆಸುತ್ತಿರುವ ಕೆಲ ನಾಯಕರಿಗೆ ಸ್ಪಷ್ಟ ಸಂದೇಶ ರವಾನೆಯಾಗಲಿದೆ ಎಂದು ಹೇಳಿದ್ದಾರೆ.


ಯಾರೋ ಮೂವರು ಸುಖಾಸುಮ್ಮನೆ ನವದೆಹಲಿಗೆ ಹೋಗಿ ವರಿಷ್ಠರ ಮನೆ ಗೇಟ್ ಮುಟ್ಟಿ ಬಂದರೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯಾಗಲ್ಲ. ಕೆಲವರು ಸೂಟು ಹೊಲಿಸಿ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅದು ವ್ಯರ್ಥ ಮಾಡುವುದು ಬೇಡ, ಸೂಟು ಬೂಟು ಅವರ ಕ್ಷೇತ್ರದ ಜಾತ್ರೆಯಲ್ಲಿ ಹಾಕಿಕೊಳ್ಳಲಿ ಎಂದು ಟಾಂಗ್ ನೀಡಿದ್ದು, ಧಾರವಾಡ, ವಿಜಯಪುರದ ಶಾಸಕರು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

Ads on article

Advertise in articles 1

advertising articles 2

Advertise under the article