-->
Demand for waive water, electric bills- 3 ತಿಂಗಳ ಅವಧಿಯ ವಿದ್ಯುತ್ ಬಿಲ್, ನೀರಿನ ಬಿಲ್ ಮನ್ನಾ ಮಾಡಿ: - ಮುನೀರ್ ಆಗ್ರಹ

Demand for waive water, electric bills- 3 ತಿಂಗಳ ಅವಧಿಯ ವಿದ್ಯುತ್ ಬಿಲ್, ನೀರಿನ ಬಿಲ್ ಮನ್ನಾ ಮಾಡಿ: - ಮುನೀರ್ ಆಗ್ರಹಕೊರೋನಾ ಕಾಲದ ಈ ಎರಡನೇ ಅಲೆಯಲ್ಲಿ ಸರಕಾರ ಘೋಷಿಸಿದ ಲಾಕ್ಡೌನ್ ನ ಈ ಸಂಕಷ್ಟದ ಕಾಲದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ಅನ್ನ ,ನೀರಿಗೂ ಕೂಡಾ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರದ ಈ ಲಾಕ್ ಡೌನ್ ಅವಧಿಯಲ್ಲಿ ಜನ ಸಾಮಾನ್ಯರಿಗೆ ಅನ್ನ ಕೊಡಲಿಲ್ಲ, ಅಕ್ಕಿ ಕೊಡಲಿಲ್ಲ, ಬೇಳೆ ಕೊಡಲಿಲ್ಲ, ನಮ್ಮ ಮಕ್ಕಳ ಶಾಲಾ ಫೀಸು ಕೊಡಲಿಲ್ಲ, ಬ್ಯಾಂಕಿಗೆ ಕಟ್ಟಬೇಕಾದ ಸಾಲದ ಕಂತನ್ನು ಬಿಡದೆ ವಸೂಲಿ ಮಾಡಿದಿರಿ, ಈಗ ಕನಿಷ್ಟ ಈ ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ , ನೀರಿನ ಬಿಲ್ಲನ್ನಾದರೂ ಮನ್ನ ಮಾಡಬೇಕೆಂದು ಡಿವೈಎಫ್ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ ನಿನ್ನೆ ಡಿವೈಎಫ್ಐ ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಹಾಗೂ ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ನಿನ್ನೆ ಕುಳಾಯಿಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.


Also Watch This:

ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯ ಸರಕಾರ ಕೋವಿಡ್ ಕಾಲದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ ಕ್ರಮವನ್ನು ವಿರೋಧಿಸಿ ಹಾಗೂ ಈ ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ "ಕತ್ತಲೆಯತ್ತ ಕರ್ನಾಟಕ" ಘೋಷಣೆಯಡಿಯಲ್ಲಿ ದೊಂದಿ, ಲ್ಯಾಟೀನ್‌, ಚಿಮಣಿ, ದೀವಟಿಗೆ ಮುಂತಾದ ಹಳೆ ಪರಿಕರಗಳನ್ನು ಹಿಡಿದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ, ಗ್ರಾಮ, ಹಳ್ಳಿಗಳಲ್ಲಿ ಪ್ರತಿಭಟನೆಯನ್ನು ನಡೆಸಲು ಕರೆ ನೀಡಿದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು, ಮೂಡಬಿದಿರೆ, ಬೆಳ್ತಂಗಡಿಯ ಸುಮಾರು 50 ಕಡೆಗಳಲ್ಲಿ ಒಟ್ಟು ರಾಜ್ಯದ ಇತರೆ ಮುನ್ನೂರಕ್ಕೂ ಅಧಿಕ ಪ್ರದೇಶಗಳಲ್ಲಿ ದೊಂದಿ, ಚಿಮಣಿ, ಗ್ಯಾಸ್ ಲೈಟುಗಳನ್ನು ಹಿಡಿದು ಡಿವೈಎಫ್ಐ ಕಾರ್ಯಕರ್ತರು ಪ್ರತಿಭಟಿಸಿರುತ್ತಾರೆ.


ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾದ್ಯಕ್ಷರಾದ ಬಿ.ಕೆ ಇಮ್ತಿಯಾಜ್ , ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಜಿಲ್ಲಾ ಮುಖಂಡರಾದ ಅಶ್ರಫ್ ಕೆ.ಸಿರೋಡ್, ಜೀವನ್ ರಾಜ್ ಕುತ್ತಾರ್, ನಿತಿನ್ ಕುತ್ತಾರ್, ಸುನಿಲ್ ತೇವುಲ, ರಫೀಕ್ ಹರೇಕಳ, ಸಾಧಿಕ್ ಕಣ್ಣೂರು, ನವೀನ್ ಕೊಂಚಾಡಿ, ನೌಶದ್ ಬೆಂಗರೆ, ಶ್ರೀನಾಥ್ ಕಾಟಿಪಳ್ಳ, ತುಳಸಿದಾಸ್ ವಿಟ್ಲ, ಆಶಾ ಬೋಳೂರು, ಮನೋಜ್ ವಾಮಂಜೂರು, ರಜಾಕ್ , ಬಾರಿಕ್ ಮುಕ್ವೆ, ಸಫ್ವಾನ್ ಮುಕ್ವೆ, ದೀಪಕ್ ಬಜಾಲ್, ಜಗದೀಶ್ ಬಜಾಲ್ , ದೀರಾಜ್ ಬಜಾಲ್,‌ಪ್ರಶಾಂತ್ ಎಂ.ಬಿ ಉರ್ವಸ್ಟೋರ್, ಸುಕೇಶ್ ಉರ್ವಸ್ಟೊರ್, ಮನೋಜ್ ಉರ್ವಸ್ಟೋರ್, ಚರಣ್ ಶೆಟ್ಟಿ ಪಂಜಿಮೊಗರು, ಸಂತೋಷ್ ಡಿಸೋಜ, ಅನಿಲ್, ಬಾವು, ಕಲೀಲ್, ಅಭಿಷೇಕ್ ಜಪ್ಪಿನಮೊಗರು, ದಿನೇಶ್ ಶೆಟ್ಟಿ, ಹನೀಫ್ ಬೆಂಗರೆ, ಬಿಲಾಲ್ ಬೆಂಗರೆ, ರಿಜ್ವಾನ್ , ಸಾಲಿ ವಿಟ್ಲ, ಸುಜಿತ್ ಬೆಳ್ತಂಗಡಿ ಮುಂತಾದವರು ನೇತೃತ್ವವಹಿಸಿ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article