-->

Lock Down relaxed in Karnataka- 11 ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರಿಕೆ; ಉಳಿದೆಡೆ ಲಾಕ್‌ಡೌನ್ ರಿಲ್ಯಾಕ್ಸ್!

Lock Down relaxed in Karnataka- 11 ಜಿಲ್ಲೆಗಳಲ್ಲಿ ನಿರ್ಬಂಧ ಮುಂದುವರಿಕೆ; ಉಳಿದೆಡೆ ಲಾಕ್‌ಡೌನ್ ರಿಲ್ಯಾಕ್ಸ್!



ರಾಜ್ಯದಲ್ಲಿ ಕೋವಿಡ್ 19 ಕೊರೋನಾ ಸೋಂಕು ಪ್ರಕರಣದಲ್ಲಿ ಗಣನೀಯ ಇಳಿಕೆ ಕಂಡುಬಂದಿರುವುದರಿಂದ ಆಯ್ದ 11 ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ಲಾಕ್‌ಡೌನ್‌ನ್ನು ಹಂತ ಹಂತವಾಗಿ ಸಡಿಲ ಮಾಡಲಾಗಿದೆ.



ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೊರು, ಕೊಡಗು ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿರ್ಬಂಧ ಮುಂದುವರಿಯಲಿದೆ. ಇದೇ ವೇಳೆ, ವಾರಾಂತ್ಯದ ಲಾಕ್‌ಡೌನ್ ಮುಂದುವರಿಯಲಿದೆ.



ಲಾಕ್‌ಡೌನ್ ಸಡಿಲಗೊಂಡ ಜಿಲ್ಲೆಗಳಲ್ಲಿ ಪಾರ್ಕ್‌ಗಳಲ್ಲಿ ಬೆಳಿಗ್ಗೆ 5 ಗಂಟೆಯಿಂದ 10 ಗಂಟೆ ವರೆಗೆ ತೆರೆಯಲಿದೆ. ವಾಕಿಂಗ್ ಮಾಡಲು ಬೆಳಿಗ್ಗೆ ಮತ್ತು ಸಂಜೆಗೆ ಅವಕಾಶ ನೀಡಲಾಗಿದೆ.



ಕಾರ್ಖಾನೆಗಳಲ್ಲಿ ಅರ್ಧಪಾಲು ಕಾರ್ಮಿಕರಿಗೆ ಅವಕಾಶ ನೀಡಲಾಗಿದೆ.


ರಾಜ್ಯಾದ್ಯಂತ ಸಂಜೆ 5 ಗಂಟೆಯಿಂದ ಬೆಳಿಗ್ಗೆ 7 ಗಂಟೆ ವರೆಗೆ ನೈಟ್ ಕರ್ಫ್ಯೂ ಮುಂದುವರಿಯಲಿದೆ.



ಬಾರ್‌ಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಬಹುದು.


ಸಿಮೆಂಟ್, ಸ್ಟೀಲ್ ಮತ್ತು ಸಂಬಂಧಪಟ್ಟ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರ, ದಿನಸಿ ಅಂಗಡಿಗಳಿಗೆ ಮಧ್ಯಾಹ್ನ 2 ಗಂಟೆ ವರೆಗೆ ಅವಕಾಶ ನೀಡಲಾಗಿದೆ.


ಹೋಟೇಲ್‌ಗಳಲ್ಲಿ ಪಾರ್ಸೆಲ್ ಸೇವೆ ಮುಂದುವರಿಯಲಿದೆ. ಗಾರ್ಮೆಂಟ್‌ ಮಳಿಗೆ ತೆರೆಯಲಿದೆ.

Ads on article

Advertise in articles 1

advertising articles 2

Advertise under the article