ಉಚಿತ ಲಸಿಕೆ ಎಂಬ ಭಾರೀ ಪ್ರಚಾರ ನಡೆಸಿದ್ದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜನರ ಕಣ್ಣಿಗೆ ಮಣ್ಣೆರಚಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.
ಜನರು ಲಸಿಕೆಗಾಗಿ ಪರಿತಪಿಸುತ್ತಿದ್ದಾರೆ. ಆದರೆ, ಸರ್ಕಾರಿ ವ್ಯವಸ್ಥೆಯಲ್ಲಿ ಸಾಕಷ್ಟು ಲಸಿಕೆ ಇಲ್ಲ ಎಂದು ಅವರು ಆರೋಪಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ಸಾಕಷ್ಟು ಲಸಿಕೆಗಳು ದಾಸ್ತಾನಿದೆ. ಈ ಮೂಲಕ ಉಚಿತ ಲಸಿಕೆ ಎಂಬ ತನ್ನ ಮಾತನ್ನು ಸರ್ಕಾರ ಅಪಹಾಸ್ಯ ಮಾಡುತ್ತಿದೆ ಎಂದು ಖಾದರ್ ಟೀಕಿಸಿದರು.
ದ.ಕ ಜಿಲ್ಲಾ ಕೋವಿಡ್ ಹೆಲ್ಪ್ ಲೈನ್ ವತಿಯಿಂದ ಬಿಜೆಪಿ ಸರಕಾರದಲ್ಲಿ ಎಲ್ಲರಿಗೂ ಉಚಿತ ಲಸಿಕೆ ಎಂಬ ಜಾಹೀರಾತು ಹಾಕಿದ ಹೋಲ್ಡಿಂಗ್ ನ ಮುಂಭಾಗ ಬಿಜೆಪಿ ಸರಕಾರ ಲಸಿಕೆ ಮಾರಾಟ ಮಾಡುವುದನ್ನು ವಿರೋಧಿಸಿ ಪ್ರತಿಭಟನೆ ನಡೆಯಿತು. ಶಾಸಕ ಯುಟಿ ಖಾದರ್ ಭಾಗವಹಿಸಿದರು.




