ರೈತರ ವಿರುದ್ಧ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ಸಾಲ ಮನ್ನಾಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪುತ್ತೂರು ಸಹಾಯಕ ಕಮೀಷನರ್ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಕಿಸಾನ್ ಸಂಯುಕ್ತ ಮೋರ್ಚಾ, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ, ಕೋಡಿಹಳ್ಳಿ ಬಣ ರೈತರ ಪರವಾಗಿ ರಾಜ್ಯ ದ ಜಿಲ್ಲಾ ಕೇಂದ್ರ , ಮತ್ತು ರಾಜ್ಯ ಪಾಲ ಭವನದ ಮುಂದುಗಡೆ ಪ್ರತಿಭಟನೆ ಮಾಡಲು ನೀಡಿದ ಕರೆಯಂತೆ ಪುತ್ತೂರು ಸಹಾಯಕ ಕಮೀಷನರ್ ರ ಮೂಲಕ ರಾಷ್ಟ್ರ ಪತಿಯವರಿಗೆ, ಮತ್ತು ರಾಜ್ಯ ಪಾಲರಿಗೆ ಮನವಿ ಕೊಡಲಾಯಿತು.
ರೈತ ವಿರೋಧಿ ಕರಾಳ ಮಸೂದೆ ಗಳನು ವಾಪಸು ಪಡೆಯುವುದು, ಏಳು ತಿಂಗಳು ಗಳಿಂದ ದಿಲ್ಲಿ ಗಡಿ ಭಾಗಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ನಿರ್ಲಕ್ಷ್ಯ ಸೇರಿರುವುದು ಕೇಂದ್ರ ಸರ್ಕಾರ ದ ದಮನಕಾರಿ ವಿರುದ್ಧ ತಮ್ಮ ಆಕ್ರೋಶವನ್ನು ರೈತ ನಾಯಕರು ಹೊರಹಾಕಿದರು.
ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯಿದೆ ಹಾಗೂ ಋಣ ಮುಕ್ತ ಕಾಯಿದೆ ಜಾರಿ ಮಾಡುವುದು, 2009ರ ಹಿಂದಿನ ದ.ಕ ರೈತರ ಎಲ್ಲಾ ಸಾಲುಗಳನ್ನು ಮನ್ನಾ ಮಾಡುವುದು ಸರ್ಕಾರ ದ ಇಲಾಖೆ ಗಳಲ್ಲಿ ಆಗುವ ಭ್ರಷ್ಟಾಚಾರಕ್ಕೆ ಮುಕ್ತಿ ಹಾಡುವುದು ಮುಂತಾದ ಬೇಡಿಕೆಗಳನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
ರೈತ ಸಂಘದ ನಾಯಕ ಬಿ. ಶ್ರೀಧರ ಶೆಟ್ಟಿ ಬೈಲುಗುತ್ತು ನೇತೃತ್ವದಲ್ಲಿ ಮನವಿ ಮಾಡಲಾಯಿತು. ಶ್ರೀಧರ ರೈ ಮೆರ್ಲ , ಲೋಕೇಶ ನಾಯ್ಕ್ ಕುಂಜೂರ್ ಪಂಜ, ಶಿವಚಂದ್ರ ಮೈಂದ್ನಡ್ಕ, ಇಸುಬು ಪುಣಚ, ಶೇಖರ ರೈ ಕುಂಬ್ರ, ಹೊನ್ನಪ್ಪ ಗೌಡ ಪರಾಣೆ ಯತೀರಾಜ್ ಮಠ ಹರ್ಷ ಕುಮಾರ್ ಹೆಗ್ಡೆ ಬಿಳಿಯೂರು , ಉಪಸ್ಥಿತರಿದ್ದರು.

