ಪಾಗಲ್ ಪ್ರೇಮಿಯೋರ್ವ ತನ್ನ ಪ್ರೇಯಸಿ ಮದುವೆಯಾಗುತ್ತಿರುವುದನ್ನು ತಿಳಿದು ಲಾಕ್ ಡೌನ್ ಅನ್ನು ಮುಂದುವರೆಸಿ, ಮದುವೆಗೆ ನಿಷೇಧ ಹೇರಬೇಕಾಗಿ ಸಿಎಂಗೆ ಟ್ವೀಟ್ ನಲ್ಲಿ ಮನವಿ ಮಾಡಿಕೊಂಡಿರುವ ಘಟನೆ ಬಿಹಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪಂಕಜ್ ಕುಮಾರ್ ಗುಪ್ತಾ ಎಂಬ ಪಾಗಲ್ ಪ್ರೇಮಿಯು ಸಿಎಂಗೆ ಬರೆದ ಟ್ವೀಟ್ ವೈರಲ್ ಆಗಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪಂಕಜ್ ಟ್ವೀಟ್ ಮಾಡಿದ್ದಾನೆ. ಟ್ವೀಟ್ ನಲ್ಲಿ ಸರ್ ಬಿಹಾರದಲ್ಲಿ ಲಾಕ್ ಡೌನ್ ಮುಂದುವರಿಸಿ , ಮದುವೆಯನ್ನು ನಿಷೇಧ ಮಾಡಿ, ನೀವು ಈಗೆ ಮಾಡಿದರೆ ಮೇ 19ರಂದು ನಡೆಯಲಿರುವ ನನ್ನ ಪ್ರೇಯಸಿಯ ಮದುವೆಯು ನಿಲ್ಲುತ್ತದೆ. ಹೀಗಾದರೆ ನಾನು ನಿಮಗೆ ಆಭಾರಿಯಾಗಿರುತ್ತೇನೆ ಎಂದು ಹಿಂದಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾನೆ.
ಯುವಕನ ನಿರಾಶೆಯ ಟ್ವೀಟ್ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ಸಿಎಂ ಬಳಿ ಪಂಕಜ್ ನ ಬೇಡಿಕೆ ಈಡೇರಿಸುವಂತೆ ಕೇಳಿಕೊಂಡಿದ್ದಾರೆ. ಇನ್ನು ಕೆಲವರು ಅಪಹಾಸ್ಯವನ್ನು ಮಾಡಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ವಿವಾಹ ಸೇರಿದಂತೆ ಜನಸಂದಣಿಯನ್ನು ಕೂಡ ನಿಷೇಧಿಸಿ ಸರಕಾರ ಆದೇಶವನ್ನು ನೀಡಿದೆ. ಇದರಂತೆ ಬಿಹಾರದಲ್ಲೂ ಕೂಡ ಲಾಕ್ ಡೌನ್ , ಸಭೆ-ಸಮಾರಂಭ ವಿವಾಹವನ್ನು ನಿಷೇಧಿಸಲಾಗಿದೆ.
ಇನ್ನು ಕೂಡ ಲಾಕ್ ಡೌನ್ ಮುಂದುವರಿಸಿದರೆ ನನ್ನ ಪ್ರೇಯಸಿಯ ವಿವಾಹ ರದ್ದಾಗಬಹುದೆಂದು ಪಾಗಲ್ ಪ್ರೇಮಿಯ ಆಸೆಯಾಗಿದೆ. ಇದಕ್ಕೆ ಸಿಎಂಗೆ ಮನವಿಯನ್ನು ಮಾಡಿಕೊಂಡು ಸುದ್ದಿಯಾಗಿದ್ದಾನೆ.