ಎಂಆರ್‌ಪಿಎಲ್ ಉದ್ಯೋಗ; ಬಿಜೆಪಿ ಸಂಸದರು, ಶಾಸಕರು ಸುಳ್ಳು ಹೇಳಿದರೇ..?: ಮುನೀರ್ ಕಾಟಿಪಳ್ಳ 7 ಪ್ರಶ್ನೆಗಳ ಸವಾಲು
ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕರಾದ ವೇದವ್ಯಾಸ ಕಾಮತ್, ಉಮಾನಥ ಕೋಟ್ಯಾನ್ ರ ಉಪಸ್ಥಿತಿಯಲ್ಲಿ mrpl ಆಡಳಿತದೊಂದಿಗೆ ನಡೆದ ಮಾತುಕತೆಯಲ್ಲಿ "ಇನ್ಜೂರಕ್ಕೂ ಹೆಚ್ಚು ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಸಂಪೂರ್ಣವಾಗಿ ಹೊರಗಿಟ್ಟು ಉತ್ತರ ಭಾರತದವರನ್ನು ಆಯ್ಕೆ ಮಾಡಿದ "ಅನ್ಯಾಯದ" ಕುರಿತು ಚರ್ಚಿಸಲಾಯಿತು.
ಕಂಪೆನಿ ಈಗ ನಡೆದಿರುವ ಆಯ್ಕೆ ಪ್ರಕ್ರಿಯೆಯನ್ನು ತಡೆ ಹಿಡಿಯಲು ಒಪ್ಪಿತು, ಮುಂದಿನ ಪ್ರಕ್ರಿಯೆಯನ್ನು ಸಂಸದರು, ಶಾಸಕರುಗಳ ಉಪಸ್ಥಿತಿಯಲ್ಲಿ ಮಾಡಲು ತೀರ್ಮಾನಿಸಲಾಯಿತು" ಎಂದು ಸಂಸದರು, ಶಾಸಕರು ಹೇಳಿಕೊಂಡಿದ್ದಾರೆ.
ತಕ್ಷಣಕ್ಕೆ ಇರುವ ಪ್ರಶ್ನೆ, ಹಾಗೂ ಸಂದೇಹಗಳು.
1) ನೇಮಕಾತಿ ಪ್ರಕ್ರಿಯೆಗೆ(ಈಗದು ಪ್ರಕ್ರಿಯೆ ಅಲ್ಲ, ಪ್ರಕ್ರಿಯೆ ಪೂರ್ಣಗೊಂಡಿದೆ) ತಡೆ ಹೇರಿರುವ ತೀರ್ಮಾನವನ್ನು ಪ್ರಕಟಿಸಬೆಏಕಾಗಿರುವುದು mrpl ಆಡಳಿತ,( ಓ ಎನ್ ಜಿ ಸಿ, ಪೆಟ್ರೋಲಿಯಂ ಇಲಾಖೆಯ ಒಪ್ಪಿಗೆ ಇಲ್ಲದೆ ಇದು ಅಸಾಧ್ಯ) ಆದರೆ ಕಂಪೆನಿ ಒಂದು ಶಬ್ದವನ್ನೂ ಮಾತಾಡಿಲ್ಲ, ಹಾಗಿರುತ್ತಾ ಸಂಸದರು, ಶಾಸಕರ ಮಾತುಗಳು ಎಷ್ಟು ನಂಬಲರ್ಹ.
2) ನೇಮಕಾತಿ ಪತ್ರ ಪಡೆದಿರುವ 184 ಜನ ಈಗಾಗಾಗಲೆ ಕಂಪೆನಿಗೆ ಆಗಮಿಸಿದ್ದಾರೆ, ಕ್ವಾಟ್ರಸ್ ಪಡೆದು ಕೊಂಡಿದ್ದಾರೆ, ಹಾಗಿರುತ್ತಾ ಸಂಸದ,, ಶಾಸಕರ ಈ ತಡೆ ಹೇಳಿಕೆ ಎಷ್ಟು ನಂಬಲರ್ಹ.
3) ಈ ರೀತಿ ನೇಮಕಾತಿಗೊಂಡವರನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ, ಸ್ವಜನಪಕ್ಷಪಾತ ನಡೆದಿದೆ ಎಂದು ಸಾಬೀತು ಪಡಿಸದೆ ಈ ಮಾದರಿಯಲ್ಲಿ ನೇಮಕಾತಿಗೆ ತಡೆ ಹೇರಲು, ಕೆಲಸದಿಂದ ಹೊರಗಟ್ಟಲು ಸಾಧ್ಯವೆ ?
4) ಈ ಮಾದರಿಯ ತಡೆಯನ್ನು ಅವರು ನ್ಯಾಯಾಲಯಕ್ಕೆ ಹೋಗಿ ಸುಲಭವಾಗಿ ನಿವಾರಿಸಿಕೊಳ್ಳಲಾರರೆ ?
5) ನೇಮಕಾತಿಯಲ್ಲಿ ಒಂದೇ ಭಾಗದ, ಕೋಚಿಂಗ್ ಸೆಂಟರ್ ಗಳ ಅಭ್ಯರ್ಥಿಗಳೆ ಆಯ್ಕೆ ಗೊಂಡಿರುವ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ, ಹತ್ತು ಕೋಟಿ ಅವ್ಯವಹಾರದ ಗುಸು ಗುಸು ಉಂಟಲ್ಲಾ ? ಈ ಕುರಿತು ತನಿಖೆ ಯಾಕಿಲ್ಲ ? ಹಿಂಜರಿಕೆ ಯಾಕೆ ?
6) ನಿಜಕ್ಕೂ ನೇಮಕಾತಿಯಲ್ಲಿ ಸ್ಥಳೀಯರಿಗೆ ಆಗುತ್ತಿರುವ ಅನ್ಯಾಯ ಸರಿ ಪಡಿಸಬಡೇಕಿದ್ದರೆ ಸರೋಜಿನಿ ಮಹಿಷಿ ವರದಿ ಸಹಿತ, 80 ಶೇಕಡಾ ಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರ ಕಾಯ್ದೆ ರೂಪಿಸಬೇಕು, ತಕ್ಷಣಕ್ಕೆ ಸುಗ್ರೀವಾಜ್ಞೆ ಹೊರಡಿಸಬೇಕು. ಜನಾಕ್ರೋಶಕ್ಕೆ ಹೆದರಿ ಕಂಪೆನಿ ಜೊತೆ ಮೀಟಿಂಗ್ ಮಾಡಿದ ಸಂಸದರು, ಶಾಸಕರು ಈ ಕುರಿತು ಯಾಕೆ ಮಾತಾಡುತ್ತಿಲ್ಲ. ಕಾನೂನು, ನಿಯಮದ ಕುರಿತು ಇವರು ಇಷ್ಟು ಅಜ್ಞಾನಿಗಳೆ ?
7) 224 ಉದ್ಯೋಗದ ನೇಮಕಾತಿ ಕುರಿತು ಎರಡು ವರ್ಷದಿಂದ ಚರ್ಚೆ ನಡೆಯುತ್ತಿದೆ. ಡಿವೈಎಫ್ಐ ಆಗಲೇ ಕಂಪೆನಿ ಮುಂಭಾಗ ಸ್ಥಳೀಯರಿಗೆ ಆದ್ಯತೆ ನೀಡಲು ಒತ್ತಾಯಿಸಿ ಧರಣಿ, ಹಕ್ಕೊತ್ತಾಯ ನಡೆಸಿತ್ತು. ಹೋರಾಟದ ಪರಿಣಾಮ "ಕನ್ನಡ ಅಭಿವೃದ್ದಿ ಪ್ರಾಧಿಕಾರ"ದ ಅಧ್ಯಕ್ಷರಾಗಿದ್ಷ ನಾಗಾಭರಣರು "ಆಯ್ಕೆ ಪ್ರಕ್ರಿಯೆ ಹಿಂಪಡೆಯಿರಿ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಿ ಹೊಸದಾಗಿ ಪ್ರಕ್ರಿಯೆ ನಡೆಸಿ" ಎಂದು ಕಂಪೆನಿಗೆ ನೋಟೀಸು ನೀಡಿದ್ದರು" ಹಾಗಿರುತ್ತಾ ದೊಡ್ಡ ಚರ್ಚೆಗೆ ಕಾರಣವಾಗಿದ್ದ ಈ ನೇಮಕಾತಿ ಪ್ರಕ್ರಿಯೆಯ ಕುರಿತು ಆಳುವ ಬಿಜೆಪಿಯ ಸಂದಸರು, ಶಾಸಕರು ಎಲ್ಲಾ ಪ್ರಕ್ರಿಯೆ ಮುಗಿತಯುವವರಗೆ ಮೌನವಾಗಿದ್ದುದರ ಗುಟ್ಟೇನು!? ಉತ್ತರ ಹೇಳುವಿರಾ,?
ತುಳುನಾಡಿನ ಮಣ್ಣಿನ ಮಕ್ಕಳೆ, ಕರುನಾಡ ಬಂಧುಗಳೆ ಇಂತಹ ನಾಟಕೀಯ ಮೀಟಿಂಗ್, ಅನಧಿಕೃತ ಹೇಳಿಕೆಗಳಿಗೆ ತಲೆ ಅಲ್ಲಾಡಿಸುವುದು ಬೇಡ. ಕಂಪೆನಿ ಅಧಿಕೃತ ಆದೇಶ ಹೊರಡಿಸಲಿ, ಪೆಟ್ರೋಲಿಯಂ ಸಚಿವಾಲಯ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರದ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸಲಿ.
ರಾಜ್ಯ ಸರಕಾರ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲಿ. ರಾಜ್ಯದಲ್ಲಿ ಎಲ್ಲಾ ಉದ್ಯಮಗಳಲ್ಲಿ ಸ್ಥಳೀಯರಿಗೆ 80 ಶೇಕಡಾ ಮೀಸಲಾತಿ ಕಡ್ಡಾಯಗೊಳಿಸಿ ಕಾಯ್ದೆಯನ್ನು ರೂಪಿಸಲಿ, ಸುಗ್ರೀವಾಜ್ಞೆ ಹೊರಡಿಸಲಿ. ಅಲ್ಲಿಯವರಗೆ ಯಾವ ಆಶ್ವಾಸನೆಯನ್ನು ನಂಬದೆ ಹೋರಾಟವನ್ನು ಮುಂದುವರಿಸೋಣ...
ಮುನೀರ್ ಕಾಟಿಪಳ್ಕ
ರಾಜ್ಯಾಧ್ಯಕ್ಷರು, ಡಿವೈಎಫ್ಐ ಕರ್ನಾಟಕ.
"ತುಳುನಾಡ್ ದ ಅಭಿವೃದ್ಧಿ ಡ್ ತುಳುವಪ್ಪೆನ ಜೋಕಕುಲೆಗ್ ಮಲ್ಲ ಪಾಲ್"

