Food Kit to Covid Victims- ಕೋವಿಡ್ ಸೋಂಕಿತರಿಗೆ ಮಾಜಿ ಶಾಸಕ ಲೋಬೋ ಆಹಾರದ ಕಿಟ್ ವಿತರಣೆ




Ex MLA Lobo and Congress leaders distributing Food, grains 
Kit to Covid Victim families at Mangaluru


ಕೋವಿಡ್ ಸೋಂಕಿತರಿಗೆ ಮಾಜಿ ಶಾಸಕ ಲೋಬೋ ಆಹಾರದ ಕಿಟ್ ವಿತರಣೆ

ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿರುವ ಕೋವಿಡ್ ಸೋಂಕಿತರಿಗೆ ಮಾಜಿ ಶಾಸಕ ಲೋಬೊ ಅವರ ನೇತೃತ್ವದಲ್ಲಿ ಆಹಾರ ದಿನಸಿ ಕಿಟ್ ವಿತರಣೆ ಮಾಡಲಾಯಿತು.


ದ. ಕ. ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿರುವ ಕೋವಿಡ್ ಸೋಂಕಿತರಿಗೆ, ಅವರ ಮನೆಗೆ ತೆರಳಿ, ಆಹಾರ ದಿನಸಿ ಕಿಟ್ ಗಳನ್ನು ವಿತರಿಸುವ ಕಾರ್ಯವನ್ನು ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಇಂದು ಪ್ರಾರಂಭಿಸಿದರು.


ಅವರು ನಗರದ ಕುಲಶೇಖರದ ಕಣ್ಣಗುಡ್ಡೆ, ಕೊಡಿಯಾಲಬೈಲ್ ಹಾಗೂ ಮಣ್ಣಗುಡ್ಡೆ ಪ್ರದೇಶದಲ್ಲಿರುವ ಕೋವಿಡ್ ಸೋಂಕಿತರಿಗೆ, ಅವರವರ ಮನೆಗೆ ತೆರಳಿ ಕಿಟ್ ಗಳನ್ನು ವಿತರಿಸಿ, ಅವರ ಕುಟುಂಬದವರಿಂದ ಸೋಂಕಿತರ ಮಾಹಿತಿಯನ್ನು ಪಡೆದು, ಅವರಿಗೆ ಧೈರ್ಯ ತುಂಬುವಂತಹ ಕೆಲಸ ಮಾಡಿದರು.


ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಪಕ್ಷದ ಮುಖಂಡರುಗಳಾದ ಟಿ. ಹೊನ್ನಯ್ಯ, ನೀರಜ್ ಪಾಲ್, ಟಿ. ಕೆ. ಸುಧೀರ್, ದುರ್ಗಾಪ್ರಸಾದ್, ಶೋಭಾ ಕೇಶವ, ರಮಾನಂದ ಪೂಜಾರಿ, ಮಂಜುಳಾ ನಾಯಕ್, ಉದಯ ಕುಂದರ್, ಯಶವಂತ ಪ್ರಭು, ಸಮರ್ಥ ಭಟ್, ಯೋಗೇಶ್ ನಾಯಕ್, ಲಿಯಾಖತ್ ಶಾ, ಲಕ್ಷ್ಮಣ್ ಶೆಟ್ಟಿ, ತನ್ವಿರ್ ಲಿಯಾಖತ್, ಶಾನ್ ಡಿಸೋಜಾ, ಆಸ್ಟನ್, ಮೀನಾ ಟೆಲಿಸ್ ಮೊದಲಾದವರು ಉಪಸ್ಥಿತರಿದ್ದರು.