ದಕ್ಷ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ಪೊಲೀಸ್ ಇಲಾಖೆಗೆ ದೇಶದಲ್ಲೇ ಹೆಮ್ಮೆ ತಂದ ಕರಾವಳಿಯ ಮಣ್ಣಿನ ಮಗ ಮಧುಕರ ಶೆಟ್ಟಿ ಅವರಿಗೆ ಕೊನೆಗೂ ಪೊಲೀಸ್ ಇಲಾಖೆ ಗೌರವ ನೀಡಿದೆ.
ಹೈದರಾಬಾದಿನ ಸರ್ದಾರ್ ವಲ್ಲಭಬಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯ ಮುಖ್ಯ ಲೆಕ್ಚರ್ ಹಾಲಿಗೆ ಪ್ರೇರಣಾದಾಯಕ ಪೊಲೀಸ್ ಅಧಿಕಾರಿಯಾಗಿದ್ದ ಡಾ| ಕೆ. ಮಧುಕರ ಶೆಟ್ಟಿ ಅವರ ಹೆಸರು ಇರಿಸಲಾಗಿದೆ. ಈ ಮೂಲಕ ಅವರಿಗೆ ಗೌರವ ಸಲ್ಲಿಸಲಾಗಿದೆ.
ಕರಾವಳಿಯ ಪ್ರಖರ ದಿನಪತ್ರಿಕೆಯಾಗಿದ್ದ "ಮುಂಗಾರು" ಸಂಪಾದಕರಾಗಿದ್ದ ನಾಡಿನ ಹಿರಿಯ ಪತ್ರಕರ್ತ ಶ್ರೀ ವಡ್ಡರ್ಸೆ ರಘುರಾಮ ಶೆಟ್ಟರ ಮಗ ಮಧುಕರ ಶೆಟ್ಟಿ ಅವರ ಸೇವೆಯನ್ನು ಈ ಮೂಲಕ ದೇಶ ನೆನೆದುಕೊಂಡಿದೆ.
