-->

dont discriminate Covid Warriors - ಶಿಕ್ಷಕರು, ಪಿಡಿಓಗಳನ್ನೂ ಕೊರೋನಾ ಸೇನಾನಿಗಳಾಗಿ ಪರಿಗಣಿಸಿ: ಮಾಜಿ ಸಚಿವ ರೈ

dont discriminate Covid Warriors - ಶಿಕ್ಷಕರು, ಪಿಡಿಓಗಳನ್ನೂ ಕೊರೋನಾ ಸೇನಾನಿಗಳಾಗಿ ಪರಿಗಣಿಸಿ: ಮಾಜಿ ಸಚಿವ ರೈ





ಅಧ್ಯಾಪಕರು, ಪಂಚಾಯತ್ ಸಿಬ್ಬಂದಿ ಮತ್ತು ಅಭಿವೃದ್ಧಿ ಅಧಿಕಾರಿಗಳು, ಕಾರ್ಮಿಕ ಇಲಾಖೆಯ ಸಿಬ್ಬಂದಿಯನ್ನು ಕೊರೋನಾ ವಾರಿಯರ್ಸ್ ಪಟ್ಟಿಯಿಂದ ಹೊರಗಿಟ್ಟಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ. 



ಕೊರೋನಾ ನಿಯಂತ್ರಣದ ಮಹಾ ಕಾರ್ಯದಲ್ಲಿ ಎಲ್ಲರೂ ಶಕ್ತಿಮೀರಿ ದುಡಿಯುತ್ತಿದ್ದಾರೆ. ಅವರನ್ನೂ ಕೊರೋನಾ ಸೇನಾನಿಗಳು ಎಂದು ಪರಿಗಣಿಸಿ ಎಂದು ಅವರು ಒತ್ತಾಯ ಮಾಡಿದ್ದಾರೆ.




ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಹಾಮಾರಿ ಕೊರೋನಾ ಸೋಂಕು ತಡೆಯಲು ಮತ್ತು ನಿಯಂತ್ರಿಸುವ ಕಾರ್ಯದಲ್ಲಿ ಶಾಲಾ ಶಿಕ್ಷಕರು ಮತ್ತು ಗ್ರಾಮ ಪಂಚಾಯತ್ ಪಿಡಿಓಗಳ ಪಾತ್ರ ಅತಿ ಮಹತ್ವದ್ದು. ಅವರನ್ನು ಕೊರೋನಾ ಸೇನಾನಿಗಳು ಎಂದು ಪರಿಗಣಿಸಲೇ ಬೇಕು ಎಂದು ಸರ್ಕಾರವನ್ನು ಅವರು ಒತ್ತಾಯಿಸಿದರು.



ಇದೇ ವೇಳೆ, ವಲಸೆ ಕಾರ್ಮಿಕರು ಹಾಗೂ ಇನ್ನಿತರ ಕಾರ್ಮಿಕ ವಿಭಾಗದೊಂದಿಗೆ ಸಂಪರ್ಕ ಹೊಂದಿರುವ ಹಾಗೂ ಕೊರೋನಾ ನಿಯಂತ್ರಣದ ಕಾಯಕದಲ್ಲಿ ತೊಡಗಿಕೊಂಡಿರುವ ಕಾರ್ಮಿಕ ಇಲಾಖೆಯ ನೌಕರರನ್ನೂ ಕೊರೋನಾ ಸೇನಾನಿಗಳು ಎಂದು ಪರಿಗಣಿಸಬೇಕು ಮತ್ತು ಕೊರೋನಾ ವಾರಿಯರ್ಸ್‌ಗೆ ನೀಡುವ ಸೌಲಭ್ಯವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.



ಈಗಾಗಲೇ ನಮ್ಮ ರಾಜ್ಯದಲ್ಲಿ ಹಲವು ಮಂದಿ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಕೋವಿಡ್ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಶಿಕ್ಷಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕೋವಿಡ್ ಕಾರ್ಯಕ್ಕಾಗಿ ತೊಡಗಿಸಿಕೊಳ್ಳಲಾಗಿದೆ. ಇವರೆಲ್ಲರೂ ಕೊರೋನಾ ವಾರಿಯರ್‌ಗಳೇ ಎಂಬುದನ್ನು ಸರ್ಕಾರ ಪರಿಗಣಿಸುವುದು ಅಗತ್ಯವಾಗಿದೆ ಎಂದುಅ ವರು ಒತ್ತಾಯಿಸಿದ್ಧಾರೆ.

Ads on article

Advertise in articles 1

advertising articles 2

Advertise under the article