-->

HC Stay demolition of Central Marke- ಸೆಂಟ್ರಲ್ ಮಾರ್ಕೆಟ್ ಕಟ್ಟಡ ನೆಲಸಮ: ಹೈಕೋರ್ಟ್ ತಡೆಯಾಜ್ಞೆ

HC Stay demolition of Central Marke- ಸೆಂಟ್ರಲ್ ಮಾರ್ಕೆಟ್ ಕಟ್ಟಡ ನೆಲಸಮ: ಹೈಕೋರ್ಟ್ ತಡೆಯಾಜ್ಞೆ





ಮಂಗಳೂರಿನ ಹೃದಯಭಾಗದಲ್ಲಿ ಇರುವ ಆರು ದಶಕ ಹಳೆಯದಾದ ಸೆಂಟ್ರಲ್ ಮಾರುಕಟ್ಟೆ ಸಂಕೀರ್ಣವನ್ನು ನೆಲಸಮ ಮಾಡುವ ಪ್ರಕ್ರಿಯೆಗೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದರು.



ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗ್ದೂಮ್ ಮುಂದಿನ ಆದೇಶದ ವರೆಗೆ ಕಟ್ಟಡ ನೆಲಸಮ ಮಾಡುವುದಕ್ಕೆ ತಡೆಯಾಜ್ಞೆ ನೀಡಿದ್ಧಾರೆ.

ಮಂಗಳೂರು ನಗರ ಪಾಲಿಕೆಯ ಅಧಿಕಾರಿಯನ್ನು ಉದ್ದೇಶಿಸಿ ಈ ಆದೇಶ ನೀಡಿದ್ದು, ಇದರಿಂದ ಮಂಗಳೂರು ಮಹಾನಗರ ಪಾಲಿಕೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ.



2020ರ ಎಪ್ರಿಲ್ 20ರಂದು ಸಾರ್ವಜನಿಕ ನೋಟೀಸ್ ಜಾರಿಗೊಳಿಸಿದ್ದ ಮಂಗಳೂರು ಪಾಲಿಕೆ ಆಯುಕ್ತರು, ಸೆಂಟ್ರಲ್ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳಿಗೆ ತೆರವುಗೊಳಿಸಲು ಸೂಚಿಸಿದ್ದರು. ಈ ಕಟ್ಟಡ ಶಿಥಿಲಗೊಂಡಿರುವುದರಿಂದ ಹಾಗೂ ಇದೇ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಂದರ ನವೀಕೃತ ಕಟ್ಟಡವನ್ನು ಕಟ್ಟುವ ಯೋಜನೆ ಇರುವುದಾಗಿ ತಿಳಿಸಿರುವ ಪಾಲಿಕೆ, ವ್ಯಾಪಾರಿಗಳನ್ನು ಬೈಕಂಪಾಡಿಯ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿತ್ತು.



2021ರ ಎಪ್ರಿಲ್ 7ರಂದು ಮಂಗಳೂರು ಪಾಲಿಕೆಯ ಆಯುಕ್ತರು ಹೊಸ ಆದೇಶವನ್ನು ಹೊರಡಿಸಿದ್ದು, ಸೆಂಟ್ರಲ್ ಮಾರುಕಟ್ಟೆಯಲ್ಲಿ ಯಾವುದೇ ವ್ಯಾಪಾರ ಯಾ ಕಚೇರಿಯನ್ನು ನಡೆಸಲು ಅನುಮತಿ ನಿರಾಕರಿಸಿದ್ದರು. ಮತ್ತು ಮೇ ಅಂತ್ಯದೊಳಗೆ ಕಟ್ಟಡವನ್ನು ತೆರವುಗೊಳಿಸಿ ಮಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರಗೊಳಿಸುವಂತೆ ಸೂಚಿಸಿತ್ತು.



ಇದರ ಬೆನ್ನಲ್ಲೇ ಮೇ 25ರಂದು ಮಂಗಳೂರ ಮಹಾ ನಗರ ಪಾಲಿಕೆ ಸೆಂಟ್ರಲ್ ಮಾರುಕಟ್ಟೆಯ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡಿತ್ತು.



Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article