Covid Ambulance by scdcc bank - ಕೋವಿಡ್ ಚಿಕಿತ್ಸೆ: ಎಸ್‌ಸಿಡಿಸಿಸಿ ಬ್ಯಾಂಕ್‌ ವತಿಯಿಂದ ಆಂಬುಲೆನ್ಸ್ ವಾಹನ ಹಸ್ತಾಂತರ


ಮಂಗಳೂರಿನಲ್ಲಿ ಕೋವಿಡ್ ಸಂತ್ರಸ್ತರ ಸೇವೆಗಾಗಿ ಉಚಿತ ಆಂಬುಲೆನ್ಸ್ ಸೇವೆಯನ್ನು ನೀಡಲು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಉಚಿತ ಆಂಬುಲೆನ್ಸ್‌ನ್ನು ಹಸ್ತಾಂತರಿಸಲಾಯಿತು.






ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ಕೀ ನೀಡುವ ಮೂಲಕ ಆಂಬುಲೆನ್ಸ್ ನ್ನು ಸೇವಾಂಜಲಿ ಚಾರಿಟೆಬಲ್ ಟ್ರಸ್ಟ್ ಗೆ ದೇಣಿಗೆಯಾಗಿ ನೀಡಿದರು.



ಈ ಆಂಬುಲೆನ್ಸ್‌ ಮೂಲಕ ಕೋವಿಡ್ ಸಂತ್ರಸ್ತರಿಗೆ ಉಚಿತವಾದ ಸೇವೆಯನ್ನು ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು ಮತ್ತು ಇದಕ್ಕೆ ಬ್ಯಾಂಕ್ ಸಹಭಾಗಿತ್ವ ಇರುತ್ತದೆ ಎಂದು ರಾಜೇಂದ್ರ ಕುಮಾರ್ ಭರವಸೆ ನೀಡಿದರು.


ಸೇವಾಂಜಲಿ ಚಾರಿಟೆಬಲ್ ಟ್ರಸ್ಟ್ ಪರವಾಗಿ ಮಾತನಾಡಿದ ವೇದವ್ಯಾಸ ಕಾಮತ್, ಸೇವಾಂಜಲಿಯ ಸೇವಾ ಕಾರ್ಯಗಳಿಗೆ ಈ ಆಂಬುಲೆನ್ಸ್ ಮತ್ತಷ್ಟು ಮೆರುಗು ತುಂಬಿದೆ. ಈ ಆಂಬುಲೆನ್ಸ್ ನ್ನು ಸಮರ್ಪಕವಾಗಿ ಸದ್ಬಳಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.