ಮಂಗಳೂರಿನ ಪದವಿನಂಗಡಿಯಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದಿದೆ. ಈ ಘಟನೆಯಲ್ಲಿ ಪ್ರಶಾಂತ್ ಎಂಬ ಯುವಕ ದಾರುಣವಾಗಿ ಸಾವನ್ನಪ್ಪಿದ್ಧಾರೆ.
ಬೋಂದೆಲ್ ಕಡೆಯಿಂದ ಪದವಿನಂಗಡಿ ಕಡೆಗೆ ಪ್ರಶಾಂತ್ ವೇಗವಾಗಿ ಬರುತ್ತಿದ್ದರು. ನಿರ್ಜನ ರಸ್ತೆ ಇರುವುದರಿಂದ ಬೈಕ್ ಅಗತ್ಯಕ್ಕಿಂತ ಸ್ವಲ್ಪ ವೇಗವಾಗಿಯೇ ಇತ್ತು.
ಆದರೆ, ರಸ್ತೆಗೆ ಅಡ್ಡಲಾಗಿ ಬಂದ ಇನ್ನೊಬ್ಬ ಸ್ಕೂಟರ್ ಚಾಲಕ ರಸ್ತೆ ಮಧ್ಯದಲ್ಲಿ ತನ್ನ ವಾಹನವನ್ನು ನಿಲ್ಲಿಸಿದ್ದು,
Video:
ಇದರಿಂದ ಏಕಾಏಕಿಯಾಗಿ ಅಡ್ಡಬಂದ ಈ ವಾಹನದಿಂದ ನಿಯಂತ್ರಣ ತಪ್ಪಿದ ಪ್ರಶಾಂತ್ ವೇಗವಾಗಿ ರಸ್ತೆ ಬದಿಯಲ್ಲಿ ಇದ್ದ ಅಂಗಡಿಯ ಮೆಟ್ಟಿಲು ಮತ್ತು ಸೋಡ ಬಾಟಲಿಯ ಟ್ರೇಗೆ ಗುದ್ದಿದ್ದಾನೆ.
ಗುದ್ದಿದ ರಭಸಕ್ಕೆ ಆತನ ದೇಹ ಆರಡಿ ಎತ್ತರಕ್ಕೆ ಹಾರಿದೆ.
ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಒಂದೇ ಕ್ಷಣದಲ್ಲಿ ವ್ಯಕ್ತಿಯೊಬ್ಬ ಮಾಡಿದ ತಪ್ಪಿಗೆ ಪ್ರಶಾಂತ್ ಬೆಲೆ ತೆತ್ತಿದ್ದಾನೆ.



