-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Pregnent Doctor death due to Corona | ಕೊರೋನಾಕ್ಕೆ ತುಂಬು ಗರ್ಭಿಣಿ ವೈದ್ಯೆ ಬಲಿ: ಸಂಬಂಧಿಯಾದರೂ ಜೀವ ಉಳಿಸದ ಆಸ್ಪತ್ರೆ?

Pregnent Doctor death due to Corona | ಕೊರೋನಾಕ್ಕೆ ತುಂಬು ಗರ್ಭಿಣಿ ವೈದ್ಯೆ ಬಲಿ: ಸಂಬಂಧಿಯಾದರೂ ಜೀವ ಉಳಿಸದ ಆಸ್ಪತ್ರೆ?




ಮಂಗಳೂರಿನ ದೇರಳಕಟ್ಟೆಯಲ್ಲಿ ಇರುವ ಕಣಚ್ಚೂರು ಆಸ್ಪತ್ರೆಯಲ್ಲಿ ಡ್ಯೂಟಿ ಡಾಕ್ಟರ್ ಆಗಿರುವ 27 ವರ್ಷ ಹರೆಯದ ಗರ್ಭಿಣಿ ಕೊರೊನಾಗೆ ತುತ್ತಾಗಿದ್ದಾರೆ.

ಮೃತ ವೈದ್ಯೆಯನ್ನು ಕೇರಳದ ಮಲಪ್ಪುರಂ ಮೂಲದ ಮುಬಷೀರಾ (27) ಎಂದು ಗುರುತಿಸಲಾಗಿದೆ.


ಆರು ತಿಂಗಳ ಗರ್ಭಿಣಿಯಾಗಿದ್ದ ಮುಬಷೀರಾ, ಆರೈಕೆಗಾಗಿ ತಮ್ಮ ತವರು ಜಿಲ್ಲೆಯಾದ ಕೇರಳದ ಮಲಪ್ಪುರಂ ಜಿಲ್ಲೆಯ ತಮ್ಮ ಊರಲ್ಲಿದ್ದರು. ಈ ವೇಳೆ ಅವರಿಗೆ ಕೊರೊನಾ ಸೋಂಕು ತಗಲಿದ್ದು ಬಳಿಕ ಅವರನ್ನು ಹತ್ತು ದಿನಗಳ ಹಿಂದೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.


ವೈದ್ಯೆ ಮುಬಾಷಿರಾ ಅವರ ಪತಿ ಇಂಡಿಯಾನಾ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು ಎನ್ನಲಾಗಿದೆ. ಇವರ ಇಡೀ ಕುಟುಂಬ ಕೇರಳ ಮೂಲದ್ದಾಗಿದ್ದು, ಕೇರಳದಲ್ಲೇ ವಾಸವಿದ್ದರು.

ಈಕೆ ಇಂಡಿಯಾನ ಆಸ್ಪತ್ರೆಯ ಮಾಲಕರಾದ ಯೂಸುಫ್ ಕುಂಬ್ಳೆ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ.


ಈ ಮಧ್ಯೆ, ಈಕೆಯ ಸಾವು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಘಟನೆಯ ಬಗ್ಗೆ ಇಂಡಿಯಾನ ಆಸ್ಪತ್ರೆ ಸ್ಪಷ್ಟೀಕರಣ ನೀಡಿದೆ.


ಅದರ ಸ್ಪಷ್ಟೀಕರಣ ಹೀಗಿದೆ..;


ಇಂಡಿಯಾನ ಹಾಸ್ಪಿಟಲ್ ಡ್ಯೂಟಿ ಡಾಕ್ಟರ್ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂಬ ಮೆಸೇಜ್ ಸೋಶಿಯಲ್ ಮಿಡಿಯಾದಲ್ಲಿ ಪ್ರಸಾರ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ.




ಕಣಚೂರು ಆಸ್ಪತ್ರೆಯಲ್ಲಿ ಸೇವಾನಿರತರಾಗಿದ್ದ ವೈದ್ಯರೊಬ್ಬರು ಅಸೌಖ್ಯ ಕಾರಣ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕೊರೊನಾ ಸೋಂಕಿನ ಪರಿಣಾಮ ಅವರನ್ನು ಹತ್ತು ದಿನಗಳ ತೀವೃ ನಿಗಾ ಘಟಕದಲ್ಲಿ ಇರಿಸಿ ನಮ್ಮ ಆಸ್ಪತ್ರೆಯ ತಜ್ಞರ ತಂಡದ ಮೂಲಕ ಉತ್ತಮ ಚಿಕಿತ್ಸೆ ನೀಡಲಾಗಿತ್ತು. 


ನಮ್ಮ ಎಲ್ಲ ಪ್ರಯತ್ನಗಳ ನಂತರವೂ ಚಿಕಿತ್ಸೆ ಫಲಕಾರಿಯಾಗದೆ ವೈದ್ಯೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ. ನಿಧನರಾದ ವೈದ್ಯೆಯು ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ದೇಶಕರೊಬ್ಬರ ಸಂಬಂಧಿ ಎಂದು ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕರ ಪತ್ರಿಕಾ ಪ್ರಕಟಣೆ ತಿಳಿಸಿದೆ.


Ads on article

Advertise in articles 1

advertising articles 2

Advertise under the article

ಸುರ