ಮೂಡುಬಿದಿರೆ: ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಫಿಯಾ ಅವರ ಸಂಶೋಧನಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ ಪ್ರದಾನ ಮಾಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ನಿವೃತ್ತ ಉಪನ್ಯಾಸಕಿ ಪ್ರೊ. ವಹೀದಾ ಸುಲ್ತಾನ ಅವರ ಮಾರ್ಗದರ್ಶನದಲ್ಲಿ ಸಫಿಯಾ ರಚಿಸಿದ 'ಇಂಪಾಕ್ಟ್ ಆಫ್ ಸೋಷಿಯಲ್ ನೆಟ್ವರ್ಕಿಂಗ್ ಸೈಟ್ಸ್ ಎಮಂಗ್ ಮೀಡಿಯಾ ಪ್ರೊಫೆಷನಲ್ಸ್ ಇನ್ ಕರ್ನಾಟಕ' ಎಂಬ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.
ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿನಿಯೂ ಆಗಿರುವ ಸಫಿಯಾ, ಅವರು ದಿ. ಅಬ್ದುಲ್ ಹಮೀದ್ ವೇಣೂರು ಹಾಗೂ ರಬಿಯಮ್ಮ ದಂಪತಿಯ ಪುತ್ರಿ.
ಸಫಿಯಾ ಮಂಗಳೂರಿನಲ್ಲಿ ಪತ್ರಿಕಾ ವರದಿಗಾರರಾಗಿಯೂ ಸಾಕಷ್ಟು ಅನುಭವ ಹೊಂದಿದ್ದು, ಮಾನವೀಯ ಕಳಕಳಿಯ ವರದಿಗಳು ಹಾಗೂ ತನಿಖಾ ವರದಿಗಳಿಗೆ ಹೆಸರುವಾಸಿಯಾಗಿದ್ದರು.
