ಮಂಗಳೂರಿನ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎನ್. ಶಿವಪ್ರಕಾಶ್ ಇವರಿಗೆ ಕರ್ನಾಟಕದ ಪ್ರೌಢಶಾಲಾ ಪಠ್ಯ ಪುಸ್ತಕ ಗಳನ್ನು ಅನುಲಕ್ಷಿಸಿ "ಕನ್ನಡ ಭಾಷಾ ಪಠ್ಯ ಪುಸ್ತಕಗಳ ಸ್ಥಿತ್ಯಂತರ ಗಳು" ವಿಷಯದ ಸಂಶೋಧನೆಗಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯವು 'ಡಾಕ್ಟರೇಟ್' ಪದವಿಯನ್ನು ನೀಡಿ ಗೌರವಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಓರ್ವ ಉತ್ತಮ ಆಡಳಿತ ಗಾರನಾಗಿ,ಶಿಕ್ಷಕರಿಗೆ ಪ್ರೇರಣಾ ಶಕ್ತಿಯಾಗಿ,ವಿದ್ಯಾರ್ಥಿಗಳಿಗೆ ಪ್ರೀತಿಯ ಮಾರ್ಗದರ್ಶಕರಾಗಿ ತಮ್ಮನ್ನು ಅವರು ತೊಡಗಿಸಿ ಕೊಂಡಿದ್ದರು.
ಶಿವಪ್ರಕಾಶ್ ಅವರು ತಮ್ಮ ಸೇವಾ ಜೀವನದುದ್ದಕ್ಕೂ ಸರಳತೆಗೆ, ಸೇವಾ ಕಾಳಜಿಗೆ ಹಾಗೂ ಮಾನವೀಯ ಮೌಲ್ಯಗಳಿಗೆ ಹೆಸರಾದವರು. ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, ಹಾಗೂ ಇನ್ನಿತರ ಪ್ರಶಸ್ತಿ ಗಳನ್ನು ಪಡೆದುಕೊಂಡಿದ್ದಾರೆ.
