-->

5th Rank to Jovita in MBA | ಆಳ್ವಾಸ್ ವಿದ್ಯಾರ್ಥಿನಿಗೆ ಜೋವಿಟಾಗೆ ಐದನೇ Rank

5th Rank to Jovita in MBA | ಆಳ್ವಾಸ್ ವಿದ್ಯಾರ್ಥಿನಿಗೆ ಜೋವಿಟಾಗೆ ಐದನೇ Rank





ಮೂಡಬಿದಿರೆ: ಆಳ್ವಾಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಜೋವಿಟಾ ನೊರೋನ್ಹಾ ಎಂಬಿಎ ಪದವಿಯನ್ನು ಐದನೇ Rank ಜೊತೆ ಯಶಸ್ವಿಯಾಗಿ ಮುಗಿಸಿದ್ದಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾನಿಲಯ ನಡೆದ ಅಂತಿಮ ಪರೀಕ್ಷೆಯಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.


ಸಿಜಿಪಿ 8.62 ಅಂಕ ಪಡೆಯುವ ಮೂಲಕ ಜೋವಿಟಾ ಈ ಸಾಧನೆ ಮಾಡಿದ್ದಾರೆ.

ಕ್ಯಾಂಪಸ್ ಆಯ್ಕೆಯ ಮೂಲಕ ಅವರು ಬೆಂಗಳೂರಿನ ಗ್ರಾಂಟ್ ಥಾರ್ನ್‌ಟನ್ ಕಂಪೆನಿಗೆ ಆಯ್ಕೆಯಾಗಿದ್ದು, ಅಲ್ಲಿ ಅವರು ಟ್ಯಾಕ್ಸ್ ಅನಾಲಿಸ್ಟ್ ಆಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.


2018-20ರ ಶೈಕ್ಷಣಿಕ ಅವಧಿಯಲ್ಲಿ ಆಳ್ವಾಸ್ ಎಂಬಿಎ ವಿಭಾಗದ ಒಟ್ಟು 78 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಎಂಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು.


ವಿದ್ಯಾರ್ಥಿಗಳ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹಾಗೂ ಆಡಳಿತ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.


Ads on article

Advertise in articles 1

advertising articles 2

Advertise under the article