ಯೆನೆಪೋಯ ದಂತ ಕಾಲೇಜಿನ ಮಕ್ಕಳ ದಂತ ಚಿಕಿತ್ಸಾ ವಿಭಾಗ ಹಾಗೂ ದಕ್ಷಿಣಕನ್ನಡ ಐಡಿಎ ಬ್ರಾಂಚಿನ ಸಹಯೋಗದೊಂದಿಗೆ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಮರ್ಸಿದಿ ಆಶ್ರಮ, ದೇರಳಕಟ್ಟೆಯಲ್ಲಿ ಹಮ್ಮಿಕೊಳ್ಳಲಾಯಿತು. ಯೆನೆಪೋಯ ದಂತ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಅಖ್ತರ್ ಹುಸೈನ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಡಾ. ಶರಣ್ ಎಸ್. ಸರ್‍ಗೋಡು, ಮುಖ್ಯಸ್ಥರು, ಮಕ್ಕಳ ದಂತ ಚಿಕಿತ್ಸಾ ವಿಭಾಗ ಕಾರ್ಯಕ್ರಮದ ಬಗ್ಗೆ ಮಾಹಿತಿಯನ್ನು ನೀಡಿದರು. ಮಕ್ಕಳ ದಂತ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಸಾಕ್ಷ್ಯ ಚಿತ್ರದ ಮೂಲಕ ಸ್ನಾತಕೋತರ ದಂತ ವೈದೈರುಗಳಾದ ಡಾ. ಪೂಜಾ ಹಾಗೂ ಡಾ. ಕೆಬ್ರಿಯವರು ನಡೆಸಿಕೊಟ್ಟರು. ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಹಲ್ಲು ಉಜ್ಜುವ ಅಭ್ಯಾಸವನ್ನು ಡಾ. ಶರಣ್ ಎಸ್. ಸರ್‍ಗೋಡುರವರು ಪ್ರಾತ್ಯಕ್ಷತೆ ಮೂಲಕ ತೋರಿಸಿಕೊಟ್ಟರು.
ಟೂಥು ಪೇಸ್ಟ್ ಹಾಗೂ ಟೂತ್ ಬ್ರೆಷ್‍ನ್ನು ಮಕ್ಕಳಿಗೆ ಹಂಚಲಾಯಿತು. ಡಾ. ಶ್ಯಾಮ್ ಎಸ್.ಭಟ್, ಉಪಪ್ರಾಂಶುಪಾಲರು, ಡಾ. ಸಂದೀಪ್ ಹೆಗ್ಡೆ, ಡಾ. ವಿವಿಯೆನ್, ದಕ್ಷಿಣಕನ್ನಡ ಐಡಿಎ ಬ್ರಾಂಚಿನ ಪ್ರತಿನಿಧಿ, ಡಾ. ರಕ್ಷಾ ಬಲ್ಲಳ್, ಡಾ. ಶೈಲೇಶ್ ಶೆಣೈ, ಡಾ. ಶ್ರವ್ಯ ಮುಂತಾದವರು ಉಪಸ್ಥಿತರಿದರು. ಸಿಸ್ಟರ್ ಲೂಸಿ, ವಾರ್ಡನ್ , ಮರ್ಸಿದಿ ಆಶ್ರಮ ಸ್ವಾಗತಿಸಿದರು ಹಾಗೂ ಭರತ್, ಸಂಯೋಜಕರು, ದಂತ ವಿಭಾಗ ವಂದಿಸಿದರು.