ಮಂಗಳೂರು ಯುನಿವರ್ಸಿಟಿಯ ಅಧೀನದಲ್ಲಿರುವ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾಗಿ ಅಹ್ನಾಫ್ ಡೀಲ್ಸ್ ಆಯ್ಕೆಯಾಗಿದ್ದಾರೆ.
ತನ್ನ ಸಣ್ಣ ಪ್ರಾಯದಲ್ಲೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಕೊಂಡಿರುವ ಅಹ್ನಾಫ್, ಅತ್ಯುತ್ತಮ ಕ್ರೀಡಾಪಟು ಕೂಡ ಆಗಿದ್ದಾರೆ.
ಎಸ್ಡಿಎಂ ಕಾಲೇಜಿನಲ್ಲಿ ಬಿಬಿಎ 1st yr ಪದವಿ ಓದುತ್ತಿರುವ ಅಹ್ನಾಫ್, ಮಂಗಳೂರಿನ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ, ಬಿ-ಹ್ಯೂಮನ್ ಇದರ ಸ್ಥಾಪಕರಾದ ಆಸಿಫ್ ಡೀಲ್ಸ್ ಅವರ ಪುತ್ರರಾಗಿದ್ದಾರೆ.
ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸುವುದು, ಅಮಲು ಮುಕ್ತ ವಿದ್ಯಾರ್ಥಿ ಸಮೂಹವನ್ನು ಕಟ್ಟುವುದು, ಕ್ರೀಡೆ ಮತ್ತು ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಹಾಗೇ ಸೌಹಾರ್ದ ಸಮಾಜ ನಿರ್ಮಾಣದಲ್ಲಿ, ರಾಷ್ಟ್ರೀಯ ಪ್ರಗತಿಯ ಕಾರ್ಯದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದನ್ನು ಮಾಡುವುದಾಗಿ ಅಹ್ನಾಫ್ ಡೀಲ್ಸ್ ಹೇಳುತ್ತಾರೆ. ವಿದ್ಯಾರ್ಥಿಗಳ ಬೇಡಿಕೆ ಮತ್ತು ಹಕ್ಕುಗಳ ಕುರಿತು ಅರಿವು ಪಡೆದು ಸ್ಪಂದಿಸುವುದು, ಸಮಾಜಮುಖಿಯಾದ ಯುವ ಸಮೂಹವನ್ನು ರೂಪಿಸುವುದು ಮತ್ತು ನೈತಿಕ ಮೌಲ್ಯಗಳನ್ನು ವಿಧ್ಯಾರ್ಥಿಗಳಲ್ಲಿ ಮೂಡಿಸುವ ಪ್ರಯತ್ನದಲ್ಲಿ ವಿಭಿನ್ನವಾಗಿ ಕಾರ್ಯಾಚರಿಸುತ್ತೇನೆ ಎಂದು ಅಹ್ನಾಫ್ ಹೇಳುತ್ತಾರೆ.
ಅಹ್ನಾಫ್ ಡೀಲ್ಸ್ ರವರವ ಗೆಲುವಿಗೆ ಟೀಂ ಬಿ ಹ್ಯೂಮನ್ ಮತ್ತು ಹಿದಾಯ ಫೌಂಡೇಶನ್ ಸಂಸ್ಥೆಯು ಅಭಿನಂದಿಸಿದ್ದು, ವಿಧ್ಯಾರ್ಥಿ ಸಂಘಟನೆಯ ಮೂಲಕ ಮಾಡಬಹುದಾದ ಯೋಚನೆ ಮತ್ತು ಯೋಜನೆಗಳು ಯಶಸ್ವಿಯಾಗಲು ಹಾರೈಸಿದೆ.
