Ravindra Shetty Ulidottu | ಮಾಧ್ಯಮ ವರದಿಗೆ ಮಿಡಿದ ಮನ: ರಾಜ್ಯ ಅರೆ, ಅಲೆಮಾರಿ ನಿಗಮ ಅಭಿವೃದ್ಧಿ ಅಧ್ಯಕ್ಷರ ಶ್ಲಾಘನೀಯ ಭೇಟಿ




ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಕೊರಟಗೆರೆಯ ಜಂಪೆನಹಳ್ಳಿಗೆ ತೆರಳಿ ಅಲ್ಲಿ ಅಲೆಮಾರಿ ಸಮುದಾಯದ ದೊಂಬಿ ದಾಸ ಜನಾಂಗಗಳನ್ನು ಭೇಟಿ ಮಾಡಿದರು.


ಅವರ ಕಷ್ಟ ಕಾರ್ಪಣ್ಯಗಳನ್ನು ಕಣ್ಣಾರೆ ಕಂಡು ಮರುಗಿದ ರವೀಂದ್ರ ಶೆಟ್ಟಿ ತಕ್ಷಣ ಪರಿಹಾರವಾಗಿ ಎರಡು ಲಕ್ಷ ರೂ.ಗಳ ಅನುದಾನವನ್ನು ಘೋಷಿಸಿದರು.

ಈ ಭೇಟಿ ಬಳಿಕ ರವೀಂದ್ರ ಶೆಟ್ಟಿ ಅವರ ಹೇಳಿಕೆ ಹೀಗಿದೆ.





"ನಾನು ರಾಜ್ಯದ ಪ್ರಮುಖ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾದ ಮತ್ತು ಪತ್ರಿಕೆಯಲ್ಲಿ ಪ್ರಸಾರವಾದ ಸುದ್ದಿಯ ಹಿನ್ನೆಲಯಲ್ಲಿ ದಲಿತ ಸಮಾಜದ ಕುಟುಂಬಕ್ಕೆ ಒಂದು ದುರಂತವೊಂದು ಬಂದೊದಗಿದೆ ಎಂಬುದರ ಬಗ್ಗೆ ಅರಿವಿಗೆ ಬಂದಿದೆ. ನಿನ್ನೆಯಷ್ಟೇ ನಾನು ಅಲೆಮಾರಿ ಜನಾಂಗದವರ ಸ್ಥಿತಿ -ಗತಿ ತಿಳಿಯಲು ರಾಜ್ಯದ ಪ್ರತಿ ಜಿಲ್ಲೆಗೆ ಪ್ರವಾಸ ಮಾಡಬೇಕೆಂದು ನಿರ್ಧರಿಸಿದಂತೆ, ಈಗಾಗಲೇ 9 ಜಿಲ್ಲೆ ಪ್ರವಾಸ ಮುಗಿಸಿದ್ದೆ.

ನಿನ್ನೆ ತುಮಕೂರು ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭ ಕೊರಟಗೆರೆ ಜಂಪೆನಹಳ್ಳಿ ದುಃಖತಪ್ತ ರಂಗನಾಥ ನೇತ್ರಾವತಿ ಮನೆಗೆ ಮಾನವೀಯತೆ ನೆಲೆಯಲ್ಲಿ ಭೇಟಿ ನೀಡಿದೆ.






ಗ್ರಾಮದ ಭೇಟಿ ಸಂದರ್ಭದಲ್ಲಿ ಸುತ್ತಮುತ್ತಲು ವಿಚಾರಿಸಿದಾಗ ಇವರು ಹಿಂದುಳಿದ ಪ್ರವರ್ಗ 1 ಕ್ಕೆ ಸೇರಿದ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ದೊಂಬಿದಾಸ ಜಾತಿಗೆ ಸೇರಿದವರು ಎಂದು ಅವರ ಪ್ರಮಾಣ ಪತ್ರ ನೋಡಿದಾಗ ತಿಳಿದು ಬಂತು. ಈ ಜಾತಿ ಮತ್ತು ಸಮುದಾಯ ನಮ್ಮ ನಿಗಮದ ವ್ಯಾಪ್ತಿಗೆ ಬರುವುದಾಗಿದೆ. ಇವರಿಗೆ ಧ್ವನಿಯಾಗಿ ನಿಲ್ಲುವುದು ಮತ್ತು ಕಷ್ಟ ನಷ್ಟಗಳಿಗೆ ಸ್ಪಂದಿಸುವುದು ನನ್ನ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ನನ್ನ ಜೊತೆ ಬಂದಿದ್ದ ದೊಂಬಿದಾಸರ ಯುವ ಸೇನೆಯ ರಾಜ್ಯಧ್ಯಕ್ಷರೂ ಆಗಿರುವ ಮ್ಯಾನ್ ಕೈಂಡ್ ಟ್ರಸ್ಟ್ ನ ರಾಜು ಆರ್ ರವರು ಯುಮಿನಿಟಿ ಟ್ರಸ್ಟ್ ವತಿಯಿಂದ ಸಂತ್ರಸ್ತರ ಮನೆ ನಿರ್ಮಾಣಕ್ಕೆ 2,00,000 ಲಕ್ಷ ನೀಡಲು ಮಂದೆ ಬಂದಿದ್ದಾರೆ.


ಸಂತ್ರಸ್ತ ಮನೆಯವರ ಹೆಸರಿನ ಬ್ಯಾಂಕ್ ಖಾತೆ ಇಲ್ಲದಿರುವುದರಿಂದ ಇನ್ನೆರಡು ದಿನದಲ್ಲಿ ಅವರಿಗೆ ಖಾತೆ ತೆರೆಯುವ ಜವಾಬ್ದಾರಿಯನ್ನು ಸ್ಥಳೀಯ ಪಂಚಾಯತ್ ಸದಸ್ಯರು ವಹಿಸಿರುತ್ತಾರೆ. 


ಸದ್ರಿ ಕುಟುಂಬದ ಸದಸ್ಯರು ಬ್ಯಾಂಕ್ ಖಾತೆ ತೆರೆದ ಕೂಡಲೇ ಪರಿಹಾರದ ಮೊತ್ತವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು. ಇನ್ನೂ ಹೆಚ್ಚಿನ ಅಗತ್ಯ ನೆರವನ್ನು ನೀಡಲಾಗುವುದು, ಅಲ್ಲದೆ ಅಲೆಮಾರಿ ಕರ್ನಾಟಕ ರಾಜ್ಯ ದೊಂಬಿದಾಸರ ಯುವ ಸೇನೆ ಮತ್ತು ರಾಜ್ಯ ದೊಂಬಿದಾಸರ ಮಹಿಳಾ ಘಟಕದ ವತಿಯಿಂದ ಅವರಿಗೆ 12,000 ರೂಪಾಯಿ ಮೌಲ್ಯದ ದಿನಸಿ ಸಾಮಾಗ್ರಿಗಳನ್ನು ವಿವಿಧ ಕುಟುಂಬಗಳಿಗೆ ನೀಡಲಾಯಿತು.