Pradeesh Marodi bags Pa Go Award | ಪ್ರಜಾವಾಣಿ ಪತ್ರಕರ್ತ ಪ್ರದೀಶ್ ಮರೋಡಿಗೆ ಈ ಬಾರಿಯ ಪ್ರತಿಷ್ಠಿತ ಪ.ಗೋ. ಪ್ರಶಸ್ತಿ




ಮಂಗಳೂರು: ಗ್ರಾಮೀಣ ವರದಿಗಾರಿಕೆಗೆ ನೀಡಲಾಗುತ್ತಿರುವ ಪ್ರತಿಷ್ಠಿತ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿಗೆ ಪ್ರಜಾವಾಣಿಯ ವರದಿಗಾರ ಪ್ರದೀಶ್ ಮರೋಡಿ ಭಾಜನರಾಗಿದ್ದಾರೆ.


ಕಳೆದ ವರ್ಷ ಜೂನ್ 25ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಅವರ "ಕೇಳುತ್ತಿಲ್ಲ ಮಲೆಯ ಮಕ್ಕಳ ಅಳಲು" ಎಂಬ ಪರಿಣಾಮಕಾರಿ ವರದಿಗೆ ಈ ಪುರಸ್ಕಾರ ಸಂದಿದೆ.


ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಕ್ಷ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ, ಪುತ್ತೂರು ಡಾ. ಶಿವರಾಮ ಕಾರಂತ ಬಾಲವನದ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಸಂಶೋಧಕ ಡಾ. ಸುಂದರ ಕೇನಾಜೆ ಮತ್ತುಮಂಗಳೂರು ವಿವಿ ಕಾಲೇಜಿನ ಉಪನ್ಯಾಸಕಿ ಡಾ. ಸೌಮ್ಯ ಕಿಕ್ಕೇರಿ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಈ ವರದಿಯನ್ನು ಪ್ರಶಸ್ತಿಗೆ ಆರಿಸಿದೆ.



ಮಂಗಳವಾರ ಮಂಗಳೂರಿನ ಪ್ರೆಸ್‌ ಕ್ಲಬ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಪ್ರಶಸ್ತಿಯನ್ನು ಪುರಸ್ಕೃತರಿಗೆ ನೀಡಲಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu