ಮೆಡಿಕಲ್ ಕಾಲೇಜಿನ ಸಿಬ್ಬಂದಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗದಗ ಜಿಲ್ಲೆಯ ಜಿಮ್ಸ್ ಕಾಲೇಜಿನಲ್ಲಿ ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನೇಣಿಗೆ ಶರಣಾಗಿದ್ದಾರೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ನಸ್ರೀನ್ ಬಾನು(26) ನೇಣಿಗೆ ಶರಣಾಗಿರುವ ದುರ್ದೈವಿಯಾಗಿದ್ದಾರೆ. ಹುಲಕೋಟಿ ಗ್ರಾಮದ ಹುಡ್ಕೋ ಕಾಲೋನಿಯಲ್ಲಿರುವ ಮನೆಯಲ್ಲಿ ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗದಗ ಜಿಮ್ಸ್ ಕಾಲೇಜಿನಲ್ಲಿ ಕಳೆದ ಐದಾರು ವರ್ಷಗಳಿಂದ ನಸ್ರೀನ್ ಬಾನು ಅಕೌಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಕೆಲಸಕ್ಕೆ ಹಾಜರಾಗಿ ಮರಳಿದ್ದಳು. ಭಾನುವಾರ ತಮ್ಮ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ನಸ್ರೀನ್ ಬಾನು ದೇಹ ಪತ್ತೆಯಾಗಿದೆ.
ನಸ್ರೀನ್ ಬಾನು ಆತ್ಮಹತ್ಯೆ ಕಾರಣ ನಿಗೂಢವಾಗಿದೆ. ಈ ಸಾವಿನ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗುತ್ತಿದ್ದು, ಸದ್ಯಕ್ಕೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸರಿಯಾದ ತನಿಖೆಯಿಂದಷ್ಟೇ ಈ ಸಾವಿನ ನಿಖರ ಕಾರಣ ಹೊರಬರಬೇಕಿದೆ.
