-->

 Kanachur students arrested for Ragging | ಕಣಚೂರು ಕಾಲೇಜಿನಲ್ಲಿ ರೇಗಿಂಗ್: 11 ವಿದ್ಯಾರ್ಥಿಗಳ ಬಂಧನ

Kanachur students arrested for Ragging | ಕಣಚೂರು ಕಾಲೇಜಿನಲ್ಲಿ ರೇಗಿಂಗ್: 11 ವಿದ್ಯಾರ್ಥಿಗಳ ಬಂಧನ




ಮಂಗಳೂರಿನ ಹೊರವಲಯ ದೇರಳಕಟ್ಟೆಯಲ್ಲಿ ಇರುವ ಕಣಚೂರು ಫಿಸಿಯೋಥೆರಪಿ ಹಾಗೂ ನರ್ಸಿಂಗ್ ಕಾಲೇಜು ಈಗ ರೇಗಿಂಗ್ ಪಿಡುಗಿಗೆ ಕುಖ್ಯಾತಿ ಪಡೆದಿದೆ. ಇಲ್ಲಿನ 11 ಮಂದಿ ವಿದ್ಯಾರ್ಥಿಗಳು ರೇಗಿಂಗ್ ಮಾಡಲು ಹೋಗಿ ಪೊಲೀಸರ ಕೈಕೋಳ ತೊಡಿಸಿಕೊಂಡಿದ್ದಾರೆ.


ಬಂಧಿತ ಎಲ್ಲ ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದಾರೆ. ಈ ಹಿಂದೆಯೂ ಸಾಕಷ್ಟು ಬಾರಿ ಜ್ಯೂನಿಯರ್ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ಉಪದ್ರವ, ಕಿರುಕುಳ ಕೊಡುತ್ತಿದ್ದರು. ಇದರಿಂದ ತೊಂದರೆಗೊಳಗಾದ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರು.


ಎಚ್ಚರಿಕೆ ಕೊಟ್ಟರೂ ನಿಲ್ಲದ ಈ ಕಾಟದಿಂದ ಆಡಳಿತ ಮಂಡಳಿಯೂ ಬೇಸತ್ತು ಹೋಗಿತ್ತು. ಅಂತಿಮವಾಗಿ ಪ್ರಕರಣ ಉಳ್ಳಾಲ ಪೊಲೀಸ್ ಠಾಣೆಯ ಮೆಟ್ಟಿಲೇರಿತು.


ರೇಗಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು 18 ಮಂದಿ ಆರೋಪಿಗಳ ಪೈಕಿ 11 ಮಂದಿಯನ್ನು ಬಂಧಿಸಿದ್ದಾರೆ.















ಬಂಧಿತರನ್ನು ಮಹಮ್ಮದ್ ಶಮ್ಮಸ್, ರೋಬಿನ್ ಬಿಜು, ಆಲ್ವಿನ್, ಜಾಬಿನ್, ಸಿರಿಲ್, ರಾಯ್ಟನ್, ಮಹಮ್ಮದ್ ಸೂರಜ್, ಆಶಿನ್ ಬಾಬು, ಅಬ್ದುಲ್ ಬಾಸಿತ್, ಅಬ್ದುಲ್ ಅನಾಸ್, ಅಕ್ಷಯ್ ಎಂದು ಗುರುತಿಸಲಾಗಿದೆ.


Mangaluru: Ullal Police have arrested 11 students of Kanachur Institute of Medical Science college for ragging the junior students in the college campus.

Students hailed from Kerala

Ads on article

Advertise in articles 1

advertising articles 2

Advertise under the article