-->

Senior Artist died on stage | ರಂಗಸ್ಥಳದಲ್ಲೇ ಅನುನೀಡಿದ ಮಂದಾರ್ತಿ ಮಾಣಿಕ್ಯ: ಹಿರಿಯ ಕಲಾವಿದ ಸಾಧು ಕೊಠಾರಿ ಹೇರಾಡಿಗೆ ಗಣ್ಯರ ಕಂಬನಿ

Senior Artist died on stage | ರಂಗಸ್ಥಳದಲ್ಲೇ ಅನುನೀಡಿದ ಮಂದಾರ್ತಿ ಮಾಣಿಕ್ಯ: ಹಿರಿಯ ಕಲಾವಿದ ಸಾಧು ಕೊಠಾರಿ ಹೇರಾಡಿಗೆ ಗಣ್ಯರ ಕಂಬನಿ




ಮಂದಾರ್ತಿ ಮೇಳದ ಹಿರಿಯ ವೇಷಧಾರಿ ಸಾಧು ಕೊಠಾರಿ(58)ಯವರು ಹೃದಯಾಘಾತದಿಂದ ರಂಗಸ್ಥಳದಲ್ಲಿಯೇ ಅಸ್ವಸ್ಥಗೊಂಡು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟ ಘಟನೆ ಶಿರಿಯಾರ ಸಮೀಪದ ಕಲ್ಬೆಟ್ಟು ಎಂಬಲ್ಲಿ ಮಂಗಳವಾರ ಬೆಳಗಿನ ಜಾವ ಸಂಭವಿಸಿದೆ..


ಮಂದಾರ್ತಿ ಮೇಳದಲ್ಲಿ ಹಲವಾರು ವರ್ಷಗಳಿಂದ ಪ್ರಧಾನ ಕಲಾವಿದನಾಗಿ ಸೇವೆ ಸಲ್ಲಿಸುತ್ತಿರುವ ಇವರು ಮಹಾಕಲಿ ಮಗದೆಂದ್ರ ಪ್ರಸಂಗದಲ್ಲಿ ಮಾಗದನಾಗಿ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ರಂಗದಲ್ಲೇ ಹೃದಯ ನೋವಿನಿಂದ ತೀವ್ರ ಅಸ್ವಸ್ಥಗೊಂಡರು.. 


ಅನಂತರ ತಕ್ಷಣ ವೇಷ ಕಳಚಿ ಮೇಳದ ಮ್ಯಾನೇಜರ್, ಬಾಗವತರರಾದ ಸದಾಶಿವ ಅಮೀನ್, ಸಹ ಕಲಾವಿದರು ಮತ್ತು ಸ್ಥಳೀಯರು ಸೇರಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದು, ಆಸ್ಪತ್ರೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ..


ಇವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರು ಹೇರಾಡಿಯ ನಾರಾಯಣ ಕೊಠಾರಿ ಮತ್ತು ರಾಧಾ ಕೊಠಾರ್ತಿಯವರ ಪುತ್ರನಾಗಿ 1960ರಲ್ಲಿ ಜನಿಸಿದರು..5ನೇಯ ತರಗತಿಯವರೆಗೆ ಶಿಕ್ಷಣವನ್ನು ಪಡೆದ ಇವರು, ತನ್ನ ಹದಿನೈದನೆಯ ವಯಸ್ಸಿನಲ್ಲಿ ಯಕ್ಷಗಾನ ರಂಗಕ್ಕೆ ಪಾದಾರ್ಪಣೆಗೈದರು.ಪ್ರಸಂಗಕರ್ತರು ಮತ್ತು ಬಾಗವತರಾಗಿದ್ದ ಬಿದ್ರಗೋಡು ವಾಸುದೇವ ಆಚಾರ್ಯರ ಹೂವಿನಕೋಲು ಮತ್ತು ಚಿಕ್ಕಮೇಳಗಳಲ್ಲಿನ ತಿರುಗಾಟವೇ ಇವರು ಯಕ್ಷರಂಗದತ್ತ ಮುಖಮಾಡಲು ಮೂಲ ಪ್ರೇರಣೆಯಾಯಿತು..


ಕೌಂಡ್ಲಿಕ, ರಕ್ತಜಂಘ, ಕಮಲಭೂಪ, ಬಲರಾಮ, ಕೌರವ, ಮಾಗದ, ಸಾಲ್ವ, ಭೀಮ, ಅರ್ಜುನ, ಹನುಮಂತ ಮೊದಲಾದ ಪಾತ್ರಗಳನ್ನು ತನ್ನ ಸದೃಢ ಶರೀರ ಮತ್ತು ಗಾಂಭೀರ್ಯದ ರಂಗನಡೆಯ ಮೂಲಕ ಬಹು ಸುಂದರವಾಗಿ ಅಭಿನಯಿಸಿ,ಪಾತ್ರದ ಚಿತ್ರಣಕ್ಕೆ ವಿಶಿಷ್ಟ ಛಾಪು ಮೂಡಿಸಿದ್ದಾರೆ.. ಮಂದಾರ್ತಿ ಕ್ಷೇತ್ರ ಮಹಾತ್ಮೆಯ ಇವರ ಬೇಡನ ವೇಷ ಬಹು ಪ್ರಸಿದ್ಧವಾಗಿತ್ತು..


ಗೋಳಿಗರಡಿ,ಕಳವಾಡಿ, ಹಾಲಾಡಿ, ಶಿವರಾಜಪುರ-ತೀರ್ಥಹಳ್ಳಿ, ಕಮಲಶಿಲೆ, ಅಮೃತೇಶ್ವರಿ,ಸಾಲಿಗ್ರಾಮ ಮತ್ತು ಮಂದಾರ್ತಿ ಮೇಳಗಳಲ್ಲಿ ಸುದೀರ್ಘ ಕಲಾವ್ಯವಸಾಯವನ್ನು ನೆಡೆಸಿರುವ ಇವರು ಹಾಸ್ಯ ಸೇರಿದಂತೆ ಅನಿವಾರ್ಯತೆ ಎದುರಾದಾಗ ಎಲ್ಲ ರೀತೀಯ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದರು..


ಇವರು ತನ್ನ ಬಿಡುವಿನ ಸಮಯದಲ್ಲಿ ಶಾಲಾವಿದ್ಯಾರ್ಥಿಗಳಿಗೆ ಯಕ್ಷಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ.. ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷರಂಗದಲ್ಲಿ ಸಲ್ಲಿಸಿರುವ ಇವರ ಪ್ರಾಮಾಣಿಕ ಕಲಾಸೇವೆಗಾಗಿ ಅನೇಕ ಸಂಘಸಂಸ್ಥೆಗಳು ಇವರನ್ನು ಗುರುತಿಸಿ ಗೌರವ ಸನ್ಮಾನವನ್ನು ನೀಡಿದೆ..


ಶ್ರೀಯುತರು ಪತ್ನಿ ಶಕುಂತಳಾ, ಮಕ್ಕಳಾದ ಮಿಥುನ್, ಮಿಲಾಕ್ಷ, ಮಾಧುರಿ ಮತ್ತು ಅಪಾರವಾದ ಬಂಧು-ಮಿತ್ರರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ..

Ads on article

Advertise in articles 1

advertising articles 2

Advertise under the article