-->

Kadri Jogi Mutt | ಕದ್ರಿ ಯೋಗೀಶ್ವರ ಮಠ: ಕಾಲಭೈರವೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕೆ ಚಾಲನೆ

Kadri Jogi Mutt | ಕದ್ರಿ ಯೋಗೀಶ್ವರ ಮಠ: ಕಾಲಭೈರವೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರಕ್ಕೆ ಚಾಲನೆ




ಮಂಗಳೂರು: ನಾಥ ಸಂಪ್ರದಾಯದಲ್ಲಿ ದೇಶಕ್ಕೆ ಹೆಸರುವಾಸಿಯಾಗಿರುವ ಕದ್ರಿ ಶ್ರೀ ಯೋಗೀಶ್ವರ ಮಠ ಅನಾದಿ ಕಾಲದಿಂದಲೂ ಪೂಜ್ಯ ಋಷಿ ಮುನಿಗಳು, ಯೋಗಪುರುಷರು ಮತ್ತು ನಾಥ ಪಂಥದ ಸಾಧುಗಳ ಆರಾಧನೆ ಮತ್ತು ಧಾರ್ಮಿಕ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದುಕೊಂಡು ಬಂದಿದೆ. ಅಲ್ಲದೆ, ದೇಶ-ವಿದೇಶಗಳ ಕೋಟ್ಯಂತರ ಭಕ್ತ ಜನರ ಆರಾಧನಾ ಕೇಂದ್ರವಾಗಿರುತ್ತದೆ ಎಂದು ಯೋಗೀಶ್ವರ ಮಠದ ರಾಜಾ ನಿರ್ಮಲನಾಥ್ ಜಿ ಅವರು ಹೇಳಿದ್ದಾರೆ.

watch this video also:




ಜನರ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ, ಇಚ್ಚಿಸಿದ ಮನೋಭಿಲಾಷೆ, ಸಂಕಲ್ಪ ಪ್ರಾಪ್ತಿ ಮತ್ತು ಸಕಲ ಇಷ್ಟಾರ್ಥ ಸಿದ್ಧಿಗಳನ್ನು ಪೂರೈಸುವ ಶ್ರೀ ಕಾಲಭೈರವ ದೇವರ ಸನ್ನಿಧಿಯಾಗಿ ಜನಮಾನಸದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುತ್ತದೆ.


ನಾಥ ಪಂಥದ ಯುಗ ಪುರುಷರಾದ ಶ್ರೀ ಮಚ್ಚೇಂದ್ರನಾಥರು ಮತ್ತು ಯೋಗ ಗುರು ಶ್ರೀ ಗೋರಕ್ಷನಾಥರವರು ಶ್ರೀ ಕಾಲಭೈರವ ದೇವರನ್ನು ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸಿ ಆರಾಧನೆ ಮಾಡಿಕೊಂಡು ಬಂದಿದ್ದರು ಎಂಬ ಪ್ರತೀತಿ ಇದೆ.


ಇದರ ಜೊತೆಗೆ, ಶ್ರೀ ಮಠದಲ್ಲಿ ಪರಿವಾರ ದೇವರುಗಳಾದ ಶ್ರೀ ಗಣಪತಿ, ಶ್ರೀ ಮರುಳು ಧೂಮವತಿ, ಶ್ರೀ ಆಂಜನೇಯ, ಶ್ರೀ ಜ್ವಾಲಾ ಮಹಮ್ಮಾಯಿ, ಶ್ರೀ ಪರಶುರಾಮ, ಯಜ್ಞಕುಂಡ, ಸೀತಾ ಬಾವಿ, ಪಾಂಡವರ ಗುಹೆಯಿಂದ ಮೊದಲ್ಗೊಂಡು ಪವಿತ್ರ ನಾಗಸನ್ನಿಧಿ ಹಾಗೂ ಪಾತಾಳ ಭೈರವನ ಸಾನಿಧ್ಯವೂ ಈ ಧಾರ್ಮಿಕ ಕೇಂದ್ರದ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.









ಶ್ರೀ ಮಠದಲ್ಲಿ ಕಾಲಭೈರವ ದೇವರ ದೇವಸ್ಥಾನದ ಗರ್ಭ ಗುಡಿಯನ್ನು ನವೀಕರಿಸಲು ನಾವು ನಿರ್ಧರಿಸಿರುತ್ತೇವೆ. ಅದರಂತೆ, ನೂತನ ಗರ್ಭಗುಡಿಯನ್ನು ಸಂಪೂರ್ಣ ಶಿಲಾಮಯವನ್ನಾಗಿ ರೂಪಿಸಲು ನಾವು ಸಂಕಲ್ಪ ತೊಟ್ಟಿದ್ದು, ಅದರಂತೆ ಈ ಬಗ್ಗೆ ಕಾರ್ಯೋನ್ಮುಖರಾಗಿರುತ್ತೇವೆ.

ಈ ಹಿನ್ನೆಲೆಯಲ್ಲಿ, ನಾಡಿನ ಸಮಸ್ತ ಭಕ್ತ ಸಮುದಾಯ ಈ ಮಹಾ ಕಾರ್ಯಕ್ಕೆ ಕಂಕಣಬದ್ಧರಾಗಿ ತಮ್ಮ ಇಚ್ಚಾನುಸಾರ ಸಹಕಾರವನ್ನು ತನು-ಮನ-ಧನದ ರೂಪದಲ್ಲಿ ನೀಡಲು ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು.


ಶ್ರೀ ಮಠದಲ್ಲಿ ನೂತನ ಗರ್ಭಗುಡಿ ನಿರ್ಮಾಣ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹಾಗೂ ಇತರ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಈ ಶುಭ ಸಂದರ್ಭದಲ್ಲಿ ನಾಡಿನ ಜನತೆಗೆ ಸರ್ವ ರೀತಿಯಲ್ಲಿ ಶುಭವಾಗಲಿ ಎಂದು ನಾವು ಹಾರೈಸುತ್ತೇವೆ ಎಂದು ಅವರು ಆಶಿಸಿದ್ದಾರೆ.

Ads on article

Advertise in articles 1

advertising articles 2

Advertise under the article