ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಬಜಾಜ್ ಫೈನಾನ್ಸ್ ಶಿಕ್ಷೆಗೆ ಗುರಿಯಾಗಿದೆ. ನಿಯಮ ಮೀರಿ ಗ್ರಾಹಕರಿಗೆ ಕಿರುಕುಳ ನೀಡಿದ್ದಕ್ಕೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗಿದೆ.
ತಮ್ಮ ಏಜೆಂಟರು ಸಾಲ ಮರುಪಾವತಿ ಮಾಡಲು ಗ್ರಾಹಕರಿಗೆ ಕಿರುಕುಳ ನೀಡಿಲ್ಲ ಎಂಬುದನ್ನು ಬಜಾಜ್ ಫೈನಾನ್ಸ್ ಕಂಪೆನಿಯು ಸಾಬೀತು ಮಾಡಲು ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಬಿಐ ತನ್ನ ನಿರ್ದೇಶನಗಳನ್ನು ಏಕೆ ಪಾಲಿಸಿಲ್ಲ ಎಂಬುದರ ಬಗ್ಗೆ ವಿವರಣೆ ಕೇಳಿ ನೋಟೀಸ್ ಜಾರಿಗೊಳಿಸಿದೆ.
ಇದಕ್ಕೆ ಸೂಕ್ತ ಉತ್ತರ ನೀಡದ ಹಿನ್ನೆಲೆಯಲ್ಲಿ ಬಜಾಜ್ ಫೈನಾನ್ಸ್ ಮೇಲೆ 2.5 ಕೋಟಿ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ.
ಅಲ್ಲದೆ, ಬಜಾಜ್ ಫೈನಾನ್ಸ್ ನ ಸಾಲ ಮರುಪಾವತಿ ಮತ್ತು ವಸೂಲಿ ಪ್ರಕ್ರಿಯೆಯಲ್ಲಿ ಆರ್‌ಬಿಐ ಕಾಯ್ದೆಯನ್ನು ಅನುಸರಿಸುವಂತೆ ಕಟ್ಟುನಿಟ್ಟನ ನಿರ್ದೇಶನವನ್ನು ನೀಡಿದೆ.
