ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದ ಆರ್ಥಿಕತೆ ನೆಲಕಚ್ಚಿದೆ. ಭಾರತೀಯ ಚಿತ್ರರಂಗವೂ ಇದಕ್ಕೆ ಹೊರತಾಗಿಲ್ಲ. ಈಗಷ್ಟೇ ಚೇತರಿಕೆ ಕಾಣುತ್ತಿರುವ ಚಿತ್ರರಂಗದಲ್ಲಿ ಈಗ ಕೋಲಾಹಲ ಎದ್ದಿದೆ.
ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿಕಪೂರ್ ಬಾಹುಬಲಿ ನಿರ್ದೇಶಕ ರಾಜಮೌಳಿ ವಿರುದ್ಧ ಗರಂ ಆಗಿದ್ದಾರೆ. ತಮ್ಮ ಬಹುನಿರೀಕ್ಷಿತ ಚಿತ್ರ ರಿಲೀಸ್ ಮಾಡುವ ಮುಂಚೆಯೇ ಸ್ಟಾರ್ ನಿರ್ದೇಶಕ ರಾಜಮೌಳಿ ತಮ್ಮ ಮುಂದಿನ ಚಿತ್ರದ ರಿಲೀಸ್ ಡೇಟ್ ಪ್ರಕಟಿಸಿರುವುದು ಬೋನಿ ಕಪೂರ್ ಗರಂ ಆಗುವಂತೆ ಮಾಡಿದೆ.
ತಮ್ಮ ಜೊತೆ ಯಾವುದೇ ಮಾತುಕತೆ ನಡೆಸದೆ, ಏಕಾಏಕಿ ರಾಜಮೌಳಿ ಈ ಚಿತ್ರವನ್ನು ಬಿಡುಗಡೆ ಮಾಡಿರುವುದು ಶ್ರೀದೇವಿ ಪತಿಗೆ ಕಣ್ಣು ಕಂಪಾಗುವಂತೆ ಮಾಡಿದೆ.
ತಮ್ಮ ಬಹುನಿರೀಕ್ಷಿತ ಚಿತ್ರ ಹಾಗೂ ರಾಜಮೌಳಿ ಬಿಡುಗಡೆ ಮಾಡಲಿರುವ ಎರಡೂ ಚಿತ್ರಕ್ಕೆ ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಬಿಡುಗಡೆ ಬಗ್ಗೆ ಬೋನಿ ಕಪೂರ್ ಜೊತೆ ಒಮ್ಮೆ ಸಮಾಲೋಚನೆ ಮಾಡಿ, ಆ ಬಳಿಕ ರಿಲೀಸ್ ಡೇಟ್ ಪ್ರಕಟಿಸಿ ಎಂದು ಸ್ವತಃ ನಟ ಅಜಯ್ ದೇವಗನ್ ಅವರು ರಾಜಮೌಳಿಗೆ ಮನವಿ ಮಾಡಿದ್ದರಂತೆ.
ಆದರೆ, ಅದಕ್ಕೆ ಕ್ಯಾರೇ ಅನ್ನದ ರಾಜಮೌಳಿ ಏಕಪಕ್ಷೀಯವಾಗಿ ಚಿತ್ರದ ರಿಲೀಸ್ ಡೇಟ್ ಪಕ್ಕಾ ಮಾಡಿರುವುದು ಗರಂ ಬೋನಿ ಕಪೂರ್ ಅವರಿಗೆ ಬೇಸರ ತರಿಸಿದೆ.