ಉಜಿರೆ: ವಿವಾಹಕ್ಕೆ ಹೆತ್ತವರು ವಿರೋಧವಿದ್ದಾರೆ ಎಂಬ ಕಾರಣಕ್ಕೆ ಪ್ರೇಮಿಸಿದ ಯುವತಿ ಜೊತೆ ಪರಾರಿಯಾಗಿದ್ದ ಹುಡುಗನ ಹಠ ಕೊನೆಗೂ ಸುಖಾಂತ್ಯಗೊಂಡಿದೆ. ಮಗನ ಒತ್ತಾಯಕ್ಕೆ ಮಣಿದ ತಂದೆ, ಪ್ರೇಮಿಸಿದ ಯುವತಿ ಜೊತೆ ಮಗನ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇಲ್ಲಿನ ಕುಂಟಿನಿ ಕಾರು ಚಾಲಕರೊಬ್ಬರ ಪುತ್ರ ಕೊರ್ಟ್ರೋಡಿ ಸಂಕೀರ್ಣದ ಯುವತಿ ಜೊತೆ ಪರಾರಿಯಾಗಿರುವ ಪ್ರಕರಣ ಮದುವೆಯೊಂದಿಗೆ ಮುಕ್ತಾಯ ಕಂಡಿದೆ.
ಪರಾರಿಯಾಗಿದ್ದ ಯುವ ಜೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ತಮಗೆ ಮದುವೆ ಮಾಡಿಕೊಡುವಂತೆ ಮೊರೆ ಇಟ್ಟಿತ್ತು. ಈ ಹಿನ್ನೆಲೆಯಲ್ಲಿ ಎರಡೂ ಕಡೆಯ ಹಿರಿಯರನ್ನು ಕರೆಸಿ ಪೊಲೀಸರು ರಾಜಿ ಮಾತುಕತೆ ನಡೆಸಿದ್ದರು.
ನಸುಕಿನ ಜಾವ ಕೊರ್ಟ್ರೋಡಿ ಸಂಕೀರ್ಣದ ಯುವತಿ ಜೊತೆ ನಿಖಾ ನಡೆಯಿತು.

