Deigo Maradon Dies due to Heart Attack | ಫುಟ್ಬಾಲ್ ದಂತಕಥೆ ಡೀಗೋ ಮರಡೋನಾ ಇನ್ನಿಲ್ಲ



ಇಡೀ ವಿಶ್ವವನ್ನೇ ತನ್ನ ಕಾಲ್ಚಳದಿಂದ ಆಯಸ್ಕಾಂತದಂತೆ ಸೆಳೆದಿದ್ದ ಅರ್ಜೆಂಟೀನಾದ ಫುಟ್ಬಾಲ್ ತಾರೆ ಡೀಗೋ ಮರಡೋನಾ ಇತಿಹಾಸದ ಪುಟ ಸೇರಿದ್ದಾರೆ. ತನ್ನ 60ನೇ ವಯಸ್ಸಿನಲ್ಲಿ ಅವರು ಇಹಲೋಕ ತ್ಯಜಿಸಿದ್ದಾರೆ.

ಬ್ಯೂನೆಸ್ ಐರೆಸ್‌ನ ಹೊರವಲಯದಲ್ಲಿ ಇರುವ ತಮ್ಮ ನಿವಾಸದಲ್ಲಿ ಅವರು ಹೃದಯಾಘಾತಕ್ಕೆ 

ಬಲಿಯಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.



ಫುಟ್ಬಾಲ್ ಕ್ಷೇತ್ರದಲ್ಲಿ ಡೀಗೋ ಮರಡೋನಾ ಮತ್ತು ಪೀಲೆ ಅವರಿಗೆ ಸರಿಸಾಟಿ ಯಾರೊಬ್ಬರೂ ಇಲ್ಲ.

ಕೆಲ ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೆ ತುತ್ತಾಗಿ ವಾರಗಳ ಕಾಲ ಚಿಕಿತ್ಸೆ ಪಡೆದು ವಾಪಸಾಗಿದ್ದರು.