-->
AIYF appeals for Youth empowerment | ಯುವಜನ ಸಬಲೀಕರಣ ನಿಗಮ ಸ್ಥಾಪನೆ: ಸರ್ಕಾರಕ್ಕೆ ಎಐವೈಎಫ್‌ ಒತ್ತಾಯ

AIYF appeals for Youth empowerment | ಯುವಜನ ಸಬಲೀಕರಣ ನಿಗಮ ಸ್ಥಾಪನೆ: ಸರ್ಕಾರಕ್ಕೆ ಎಐವೈಎಫ್‌ ಒತ್ತಾಯಮಂಗಳೂರು: ಯುವಶಕ್ತಿ ದೇಶದ ಆಸ್ತಿ. ಆದ್ದರಿಂದ ಯುವಜನರ ಸಬಲೀಕರಣಕ್ಕೆ ನಿಗಮ ಸ್ಥಾಪನೆಯ ಅಗತ್ಯವಿದೆ ಎಂದು ಎಐವೈಎಫ್‌ ಸರ್ಕಾರಕ್ಕೆ ಸಲಹೆ ನೀಡಿದೆ.


ಅಖಿಲ ಭಾರತ ಯುವಜನ ಫೆಡರೇಷನ್, ಮಂಗಳುರು ತಾಲೂಕು ಸಮಿತಿ ಈ ಬಗ್ಗೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಒತ್ತಾಯಿಸಿದೆ.ರಾಜ್ಯ ಸರಕಾರ ಧರ್ಮ, ಜಾತಿ, ಪ್ರದೇಶ ಆಧಾರದಲ್ಲಿ ಅನೇಕ ನಿಗಮ ಹಾಗೂ ಪ್ರಾಧಿಕಾರಗಳನ್ನು ರಚಿಸುತ್ತಿದೆ. ಇಂತಹ ನಿಗಮಗಳಿಂದ ಸಮಾಜದ ಮೇಲ್ವರ್ಗದ ಕೆಲವರಿಗೆ ಮಾತ್ರ ಉಪಯೋಗವಾಗುತ್ತಿದ್ದು, ಮಧ್ಯಮ ಮತ್ತು ಕೆಳ ವರ್ಗದ ಯುವಜನರಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಆದ್ದರಿಂದ ಯುವಜನರ ಸಬಲೀಕರಣಕ್ಕೆ ಯುವಜನ ನಿಗಮ ಸ್ಥಾಪಿಸುವ ಅಗತ್ಯ ಇಂದು ಎದ್ದು ಕಾಣುತ್ತಿದೆ ಎಂದು ಅದು ಮನವಿಯಲ್ಲಿ ಹೇಳಿದೆ.ಹಿಂದೆ 2013ರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ‘ಸ್ವಾಮಿ ವಿವೇಕಾನಂದ ಯುವಜನ ಸಬಲೀಕರಣ ನಿಗಮ’ ವನ್ನು ಸ್ಥಾಪಿಸಲು ಮಂತ್ರಿಮಂಡಲ ಒಪ್ಪಿಗೆ ನೀಡಿತ್ತು. ನಂತರದಲ್ಲಿ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ ಎಂದು ಸಂಘಟನೆ ವಿಷಾದ ವ್ಯಕ್ತಪಡಿಸಿದೆ.

ನಮ್ಮ ರಾಜ್ಯದಲ್ಲಿ ಸುಮಾರು 1 ಕೋಟಿ 80 ಲಕ್ಷ ಯುವಜನರಿದ್ದಾರೆ. ಈ ಸಮುದಾಯ ಬಲಿಷ್ಠವಾದರೆ ರಾಜ್ಯಕ್ಕೆ ಮತ್ತು ದೇಶದ ಭವಿಷ್ಯ ಸುಭದ್ರವಾಗಲಿದೆ. ಆದ್ದರಿಂದ ಯುವಜನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿ, 20-11-2020ರಂದು ಅಖಿಲ ಭಾರತ ಯುವಜನ ಫೆಡರೇಷನ್, ಮಂಗಳುರು ತಾಲೂಕು ಸಮಿತಿ ಮನವಿಯೊಂದನ್ನು ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದಾರೆ.ನಿಯೋಗದಲ್ಲಿ ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್, ಜೊತೆ ಕಾರ್ಯದರ್ಶಿ ಕೃಷ್ಣಪ್ಪ ಪಿಲಿಲುಳ ಹಾಗೂ ಕೋಶಾಧಿಕಾರಿ ರಘು ಮಾಲೆಮಾರ್ ಭಾಗವಹಿಸಿದ್ದರು. 

Ads on article

Advertise in articles 1

advertising articles 2

Advertise under the article

WhatsApp Image 2021-10-17 at 10.29.15 PM (1).jpeg